
ಪ್ರಜಾವಾಣಿ ವಾರ್ತೆ
ಪರಮಾನಂದವಾಡಿ: ಸಮೀಪದ ಕುಡಚಿ ಪಟ್ಟಣಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಭೇಟಿ ನೀಡಿ, 2005ರಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡು ಗುಡಿಸಲಿನಲ್ಲಿ ವಾಸಿಸುತ್ತಿರುವ ಕುಟುಂಬದವರ ಸಮಸ್ಯೆ ಆಲಿಸಿದರು.
‘2026ರ ಮಾರ್ಚ್‌ನೊಳಗೆ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಮಂಜೂರುಗೊಳಿಸಿ, 480 ಮನೆ ನಿರ್ಮಿಸಿಕೊಡಲಾಗುವುದು’ ಎಂದು ಭರವಸೆ ಕೊಟ್ಟರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಯಾವುದೇ ನಿರಾಶ್ರಿತರನ್ನು ಕೈಬಿಡುವುದಿಲ್ಲ. ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವ ಸರ್ಕಾರ ಇದಾಗಿದೆ. ವಸತಿ ಸಚಿವ ಮತ್ತು ನಾನು ಸೇರಿಕೊಂಡು ಪ್ರತಿ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ. ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುತ್ತೇವೆ’ ಎಂದು ಭರವಸೆ ನೀಡಿದರು.
ಮೌಲಾನಾ ಮೆಹಬೂಬ್ ದೌಲ್ ಒಮನೆ, ಮೌಲಾನಾ ಅಲ್ತಾಫ್ ಪಟ್ಟಾಯಿತ, ಶಾಸಕ ಮಹೇಂದ್ರ ತಮ್ಮಣ್ಣವರ, ಶಾಸಕ ಫಿರೋಜ್ ಸೇಠ್, ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಎನ್.ಶಂಕರ, ಶಿವಾನಂದ ಕೆ., ಪ್ರಭಾಕರ ಕೆ., ಅಮೀನ್ ಜಾತಕಾರ, ದುರ್ಗಪ್ಪ ದಂಡಿನವರ, ಲಕ್ಕವ್ವ ಮಂಟೂರ, ಪ್ರಸಾದ ಶಿಂಗೆ, ಫಾತಿಮಾ ಶೇಖ್, ಸಪುರಾ ಅಲಗೂರ, ಮಕ್ತುಮ್‌ಅಲಿ ಶೇಖ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.