ADVERTISEMENT

ಗಾಳಿಯಲ್ಲಿ ಗುಂಡು: ವ್ಯಕ್ತಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 2:30 IST
Last Updated 10 ಫೆಬ್ರುವರಿ 2026, 2:30 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಬೆಳಗಾವಿ: ತಾಲ್ಲೂಕಿನ ಸುಳಗಾದಲ್ಲಿ ಲಕ್ಷ್ಮಿದೇವಿ ದೇವಸ್ಥಾನದ ಉದ್ಘಾಟನೆ ಪ್ರಯುಕ್ತ ಈಚೆಗೆ ನಡೆದ ಮೆರವಣಿಗೆ ವೇಳೆ, ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಭಾವುರಾವ್‌ ಗಡ್ಕರಿ ಎಂಬಾತನ ವಿರುದ್ಧ ಕಾಕತಿ ಠಾಣೆಯಲ್ಲಿ ದೂರು ದಾಖಲಾಗಿದೆ.

'ಸ್ವಯಂ ರಕ್ಷಣೆಗಾಗಿ ಭಾವುರಾವ್ ರಿವಾಲ್ವರ್ ಹೊಂದಿದ್ದ. ಯುವಕರ ಮಧ್ಯೆ ಘರ್ಷಣೆ ನಡೆದಾಗ ಗುಂಡು ಹಾರಿಸಿದ್ದಾನೆ. ಆತನಿಂದ ರಿವಾಲ್ವರ್‌, ಎರಡು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.