ADVERTISEMENT

ಹಾಲ ಸಕ್ಕರೆ ಕಾರ್ಖಾನೆ ಕಬ್ಬು ದರ ಪ್ರತಿ ಟನ್ನಿಗೆ ₹ 3 ಸಾವಿರ ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 13:54 IST
Last Updated 3 ನವೆಂಬರ್ 2023, 13:54 IST
ಮಲಗೊಂಡಾ ಪಾಟೀಲ
ಮಲಗೊಂಡಾ ಪಾಟೀಲ   

ನಿಪ್ಪಾಣಿ: ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಹಿತಚಿಂತಕರಾದ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿ ಕೈಕೊಂಡ ನಿರ್ಣಯದಂತೆ 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ ಕಬ್ಬಿಗೆ ₹ 3 ಸಾವಿರದಂತೆ ಕಬ್ಬಿನ ಬೆಲೆಯನ್ನು ನೇರವಾಗಿ ಪಾವತಿಸಲು ನಿರ್ಣಯಿಸಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಮಲಗೊಂಡ ಪಾಟೀಲ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯ ಮೂಲಕ ಅವರು ‘ಪ್ರಸ್ತುತ ಸನ್ 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗಾಗಿ ಸರ್ಕಾರವು ಕಾರ್ಖಾನೆಗೆ ನಿಗದಿಪಡಿಸಿದ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್‍ಆರ್‌ಪಿ) ಪ್ರತಿಟನ್ ಕಬ್ಬಿಗೆ, ಕಬ್ಬುಕಟಾವು ಮತ್ತು ಸಾಗಾಣಿಕೆ ದರ ಸೇರಿ ₹ 3611 ಹೆಚ್ಚುವರಿ ಆಗಿರುತ್ತದೆ. ಆದ್ದರಿಂದ ಆಡಳಿತ ಮಂಡಳಿಯು ಕೈಕೊಂಡ ತಿರ್ಮಾನದ ಪ್ರಕಾರ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ಪ್ರತಿ ಟನ್ ಕಬ್ಬಿಗೆ ₹ 3 ಸಾವಿರದಂತೆ ನಗದು ಬೆಲೆಯನ್ನು ಆಯಾ ರೈತರ ಬ್ಯಾಂಕು ಖಾತೆಗಳಿಗೆ ಮೊತ್ತವನ್ನು ಜಮಾ ಮಾಡಲಾಗುವುದು. ಕಾರಣ ಕಬ್ಬು ಪೂರೈಸುವ ಸದಸ್ಯರು ಹಾಗೂ ರೈತ ಬಾಂಧವರು ತಮ್ಮ ಕಬ್ಬನ್ನು ನಮ್ಮ ಕಾರ್ಖಾನೆಗೆ ಕಳುಹಿಸಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT