ಗೋಕಾಕ: ನಗರದ ಕೊಳವಿ ಹನುಮಾನ ದೇವಸ್ಥಾನದ ಬಳಿ ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ಬೃಹತ್ ಹಲಗೆ ಹಬ್ಬಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಮೆರವಣಿಗೆಯುದ್ದಕ್ಕೂ ವಿವಿಧ ವಾದ್ಯಮೇಳ, ಸಾಂಪ್ರದಾಯಿಕ ವೇಷಭೂಷಣ, ಹಲಗೆ ಸದ್ದು ಗಮನಸೆಳೆಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ಸಾಗಿತು.
ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಅಮರನಾಥ ಜಾರಕಿಹೊಳಿ, ಆರ್‌ಎಸ್‌ಎಸ್ ಪ್ರಮುಖರಾದ ಎಂ.ಐ. ಹಾರುಗೇರಿ, ನಾರಾಯಣ ಮಠಾಧಿಕಾರಿ, ಮಲ್ಲಿಕಾರ್ಜುನ ಚುನಮರಿ, ಪ್ರಕಾಶ ವರ್ಜಿ, ಹಿಂದೂ ಜಾಗರಣ ವೇದಿಕೆಯ ಸಮರ್ಥ ಖಾಸನೀಸ, ಅಂಕುಶ ರೇಣಕೆ, ಸಾಯಿ ಕೋಸಂದರ, ವಿಶ್ವ ಹಿಂದೂ ಪರಿಷತ್‌ನ ಸದಾಶಿವ ಗುದಗಗೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.