ADVERTISEMENT

ಮೂಡಲಗಿ: ಕಲ್ಲೋಳಿ ಹನುಮಂತ ದೇವರ ಪಾಲಕಿ ಉತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 2:16 IST
Last Updated 8 ಡಿಸೆಂಬರ್ 2025, 2:16 IST
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಹನುಮಂತ ದೇವರ ಕಾರ್ತಿಕೋತ್ಸವದ ಅಂಗವಾಗಿ ಪಾಲಕಿ ಉತ್ಸವ ನಡೆಯಿತು
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಹನುಮಂತ ದೇವರ ಕಾರ್ತಿಕೋತ್ಸವದ ಅಂಗವಾಗಿ ಪಾಲಕಿ ಉತ್ಸವ ನಡೆಯಿತು   

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಹನುಮಂತ ದೇವರ ಕಾರ್ತಿಕೋತ್ಸವದ ಅಂಗವಾಗಿ ಭಾನುವಾರ ಬೆಳಗಿನ ಜಾವ ಭಕ್ತಿಯಿಂದ ಪಾಲಕಿ ಉತ್ಸವ ನಡೆಯಿತು.  

ಬೆಳಿಗ್ಗೆ ಕರ್ತೃ ಗದ್ಗುಗೆಗೆ ಅಭಿಷೇಕ, ವಿಶೇಷ ಪೂಜೆ ನಡೆಯಿತು. ಹನುಮಂತ ದೇವರ ಮೂರ್ತಿಗೆ ವಿಶೇಷ ವಸ್ತ್ರಾಲಂಕಾರ ಮಾಡಲಾಗಿತ್ತು.  ಕಲ್ಲೋಳಿಯ ಪ್ರಸಿದ್ದ ಸಂಬಾಳ ವಾದ್ಯ, ಕರಡಿ ಮಜಲು, ತಾಸೆ ವಾದನ, ಬ್ಯಾಂಡ್‌ ತಂಡದ ಸೇರಿದಂತೆ ವಿವಿಧ ವಾದ್ಯಗಳ ವಾದನವು ಹಾಗೂ ದಿವಟಿಗೆಯ ಬೆಳಕು ಉತ್ಸವದ ವೈಭವ ಸಾರುತಿತ್ತು.  

ಭಕ್ತರು ಹರಕೆ ತೀರಿಸಿದರು. ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸಿ ಪಾಲಕಿ ಉತ್ಸವದಲ್ಲಿ ಭಾಗವಹಿಸಿದ್ದರು.

ADVERTISEMENT

ಕಾರ್ತಿಕೋತ್ಸವ ಕೊನೆಯ ದಿನವಾದ ಡಿ.13ರಂದು ಮರುಕಾರ್ತಿಕದೊಂದಿಗೆ ಹನುಮಂತ ದೇವರ ಪಾಲಕಿ ಉತ್ಸವ ನಡೆಯಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.