ADVERTISEMENT

ಹರಗಾಪುರ: ಗುಡ್ಡ ಕುಸಿತ, ಪ್ರಾಣಾಪಾಯ ಇಲ್ಲ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 15:30 IST
Last Updated 24 ಜುಲೈ 2024, 15:30 IST
ಹುಕ್ಕೇರಿ ತಾಲ್ಲೂಕಿನ ಹರಗಾಪುರ ಗುಡ್ಡದಲ್ಲಿ ಕುಸಿತ ಕಂಡು ಬಂದಿದ್ದರಿಂದ ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣ ಕಟ್ಟಿ ಭೇಟಿ ನೀಡಿ ಪರಿಶೀಲಿಸಿದರು
ಹುಕ್ಕೇರಿ ತಾಲ್ಲೂಕಿನ ಹರಗಾಪುರ ಗುಡ್ಡದಲ್ಲಿ ಕುಸಿತ ಕಂಡು ಬಂದಿದ್ದರಿಂದ ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣ ಕಟ್ಟಿ ಭೇಟಿ ನೀಡಿ ಪರಿಶೀಲಿಸಿದರು   

ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುಡ್ಡ ಕುಸಿತದ ಸ್ಥಳಕ್ಕೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ ಭೇಟಿ ನೀಡಿ ಪರಿಶೀಲಿಸಿದರು.

‘ಕಲ್ಲುಗಳು ಉರುಳಿ ಬಿದ್ದು, ವಸತಿ ಪ್ರದೇಶದ ಸಮೀಪ ಬಂದು ನಿಂತಿವೆ. ಯಾವುದೇ ಪ್ರಾಣಹಾನಿ ಅಥವಾ ಮನೆಗೆ ತೊಂದರೆ ಆಗಿಲ್ಲ. ಆದರೆ ಕಲ್ಲು ಬಿದ್ದ ಹೊಡೆತಕ್ಕೆ ಚರಂಡಿ ರಿಪೇರಿಗೆ ಬಂದಿವೆ’ ಎಂದು ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಅಧ್ಯಕ್ಷ ಪವನ್ ಪಾಟೀಲ್ ತಿಳಿಸಿದರು.

‘ಗುಡ್ಡದ ಸುತ್ತ ಸುಮಾರು ನಾಲ್ಕು ನೂರು ಮನೆಗಳಿದ್ದು, ಇನ್ನೂ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದುರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಸುತ್ತಮುತ್ತಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಅಥವಾ ಸುರಕ್ಷಿತ ಪ್ರದೇಶಕ್ಕೆ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಬೇಕು’ ಇಒ ಪ್ರವೀಣ ಕಟ್ಟಿ ಸೂಚಿಸಿದರು.

ADVERTISEMENT

ಹಳೆ ಮನೆಯಲ್ಲಿ ಅಥವಾ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಡಂಗುರ ಸಾರಲು ಸೂಚಿಸಲಾಯಿತು.

ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ರಾಜು ಢಾಂಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುರೇಖಾ ಹಾಲಟ್ಟಿ, ಉಪಾಧ್ಯಕ್ಷೆ ಸುಮನ್ ಸುತಾರ್, ಸದಸ್ಯರು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಪಿಡಿಒ ಶಿಲ್ಪಾ ಮಗದುಮ್ಮ ಇದ್ದರು.

ಹುಕ್ಕೇರಿ ತಾಲ್ಲೂಕಿನ ಹರಗಾಪುರ ಗುಡ್ಡದಲ್ಲಿ ಕುಸಿತ ಕಂಡು ಬಂದಿದ್ದರಿಂದ ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣ ಕಟ್ಟಿ ಭೇಟಿ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.