ADVERTISEMENT

ಒಂದೇ ಕುಟುಂಬದ ಇಬ್ಬರಿಗೆ ಹೃದಯಾಘಾತ, ಸಾವು: ವಿಷಯ ಕೇಳಿ ಕುಸಿದು ಬಿದ್ದ ಗರ್ಭಿಣಿ

ಏಕಕಾಲಕ್ಕೆ‌ ಮೂರು ಆಘಾತ; ಸಾವಿನಲ್ಲೂ ಒಂದಾದ ಅಣ್ಣ- ತಮ್ಮ, ಗರ್ಭಿಣಿ ಪಾರು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 9:37 IST
Last Updated 4 ಅಕ್ಟೋಬರ್ 2025, 9:37 IST
<div class="paragraphs"><p>ಬಸವರಾಜ, ಸತೀಶ</p></div>

ಬಸವರಾಜ, ಸತೀಶ

   

ಬೆಳಗಾವಿ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಕಪರಟ್ಟಿ ಗ್ರಾಮದಲ್ಲಿ ಶನಿವಾರ, ತಮ್ಮ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಕೇಳಿ ಅಣ್ಣ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಎಸ್‌.ಎಸ್.ಎಲ್.ಸಿ ಓದುತ್ತಿದ್ದ ಸತೀಶ ಬಾಗನ್ನವರ (16) ಅವರಿಗೆ ಶನಿವಾರ (ಅ.4) ನಸುಕಿನ 4ಕ್ಕೆ ಹೃದಯಾಘಾತವಾಯಿತು. ಸತೀಶ ಬದುಕುಳಿಯುವುದು ಕಷ್ಟ ಎಂಬ ಸುದ್ದಿ ಕೇಳಿದ ಅಣ್ಣ ಬಸವರಾಜ ಬಾಗನ್ನವರ (24) ಕೂಡ ಕುಸಿದು ಬಿದ್ದ. ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ತಮ್ಮ ಸತೀಶ್ ಬಾಗನ್ನವರ ಸಾವಿನ ಸುದ್ದಿ ಬಂದಿತು. ಸುದ್ದಿ ಕೇಳಿದ ತಕ್ಷಣವೇ ಬಸವರಾಜನು ಸಹಿತ ಹೃದಯಾಘಾತದಿಂದ ಮೃತಪಟ್ಟರು ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ADVERTISEMENT

ತನ್ನ ಪತಿ ಹಾಗೂ ಮೈದುನನ ಸಾವಿನ ಸುದ್ದಿ ಕೇಳಿ ಬಸವರಾಜ ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದ ಪವಿತ್ರಾ (20) ಕೂಡ ಕುಸಿದು ಬಿದ್ದರು. ಅವರನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇಬ್ಬರು ಗಂಡು ಮಕ್ಕಳು ತಮ್ಮ ಕಣ್ಮುಂದೆಯೇ ಜೀವ ಕಳೆದುಕೊಂಡಿದ್ದನ್ನು ಕಂಡು ತಂದೆ-ತಾಯಿ ಆಘಾತಕ್ಕೀಡಾಗಿದ್ದಾರೆ. ಆಕ್ರಂದನ ಮುಗಿಲು ಮುಟ್ಟಿದೆ.

ಸತೀಶ 10ನೇ ತರಗತಿಯಲ್ಲಿ ಓದುತ್ತಿದ್ದು, ಬಸವರಾಜ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.