ADVERTISEMENT

ಎರಡು ನವಜಾತ ಶಿಶುಗಳಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 14:33 IST
Last Updated 16 ನವೆಂಬರ್ 2023, 14:33 IST
ನವಜಾತ ಶಿಶುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಬೆಳಗಾವಿಯ ಅರಿಹಂತ ಆಸ್ಪತ್ರೆ ವೈದ್ಯರ ತಂಡ
ನವಜಾತ ಶಿಶುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಬೆಳಗಾವಿಯ ಅರಿಹಂತ ಆಸ್ಪತ್ರೆ ವೈದ್ಯರ ತಂಡ   

ಬೆಳಗಾವಿ: ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಎರಡು ನವಜಾತ ಶಿಶುಗಳಿಗೆ ಇಲ್ಲಿನ ಅರಿಹಂತ ಆಸ್ಪತ್ರೆ ವೈದ್ಯರು ನ.9ರಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಚೇತರಿಸಿಕೊಂಡಿರುವ ಶಿಶುಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಇರಾಕ್‌ನಿಂದ ಬಂದಿದ್ದ 30 ದಿನಗಳ ಶಿಶು ಮತ್ತು ಗೋವಾದಿಂದ ಬಂದಿದ್ದ 10 ದಿನಗಳ ಶಿಶುವಿಗೆ ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಡಿ.ದೀಕ್ಷಿತ್‌ ನೇತೃತ್ವದಲ್ಲಿ ಡಾ.ಅಭಿಷೇಕ ಜೋಶಿ, ಡಾ.ಅಮೃತ ನೇರ್ಲಿಕರ್‌, ಡಾ.ಎಂ.ಬಿ.ಪ್ರಶಾಂತ, ಡಾ.ಅವಿನಾಶ ಲೋಂಡೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

ವೈದ್ಯರ ಕಾರ್ಯಕ್ಕೆ ಆಸ್ಪತ್ರೆ ಅಧ್ಯಕ್ಷ ರಾವಸಾಹೇಬ್‌ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ, ಉತ್ತಮ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.