ADVERTISEMENT

ಹುಕ್ಕೇರಿ: ಹಿಡಕಲ್ ಡ್ಯಾಂ ಕ್ರಸ್ಟ್ ಗೇಟ್ ಓಪನ್ ಇಂದು

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 2:37 IST
Last Updated 9 ಜುಲೈ 2025, 2:37 IST
   

ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆನಲ್ಲಿ ತಾಲ್ಲೂಕಿನ ಹಿಡಕಲ್ ಜಲಾಶಯದ ನೀರಿನ ಮಟ್ಟ ಮಂಗಳವಾರ ಸಂಜೆ 2164 ಅಡಿ ಏರಿಕೆ (ಗರಿಷ್ಟ 2175 ಅಡಿ) ಕಂಡಿದ್ದು, ಬುಧವಾರ ಡ್ಯಾಂನ ಕ್ರಸ್ಟ್ ಗೇಟ್ ತೆರೆಯಲಾಗುವುದು ಎಂದು ಸಿಬಿಸಿ 2 ಕಚೇರಿಯ ಎಇಇ ಜಗದೀಶ್ ತಿಳಿಸಿದ್ದಾರೆ.

ಬುಧವಾರ ಸಂಜೆ 6 ಗಂಟೆಗೆ 5000 ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಸಲಾಗುವುದು ಎಂದಿರುವ ಅವರು, ನದಿ ತಟದ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಸುಲ್ತಾನಪುರ ಬಳಿ ಹಿರಣ್ಯಕೇಶಿ ಮತ್ತು ಘಟಪ್ರಭಾ ನದಿಗಳು ಸಂಗಮವಾಗುವುದರಿಂದ ಕೆಳಗಿನ ಪ್ರದೇಶದಲ್ಲಿ ಹೆಚ್ಚು ನೀರು ಹರಿಯುವ ಜತೆಗೆ ಘಟಪ್ರಭಾ ಬಳಿ ನಿರ್ಮಿಸಿರುವ ‘ಧೂಪದಾಳ ಜಲಸಂಗ್ರಹ’ ಹೆಚ್ಚಾಗಿ ಗುಡಸ್, ಕೊಟಬಾಗಿ ಮತ್ತಿತರ ಗ್ರಾಮಗಳ ಬಳಿ ಹಿನ್ನೀರು ಹೆಚ್ಚಾಗುವುದು ಎಂದೂ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.