
ಹಿರೇಬಾಗೇವಾಡಿ: ಬಡೇಕೊಳ್ಳ ಕ್ರಾಸ್ ಬಳಿ ಬೆಳಗಾವಿಯಿಂದ ಧಾರವಾಡ ಕಡೆ ಸಾಗಿದ ಇಳಿಜಾರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ 5 ವಾಹನಗಳು ಸರಣಿ ಅಪಘಾತಗೊಂಡಿದ್ದು ಅದೃಷ್ಟಾವಷಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬಟ್ಟೆ ತುಂಬಿದ್ದ ಕಂಟೇನರ್ ಮುಗುಚಿ ಬಿದ್ದಿದ್ದು ಅದರ ಹಿಂದಿನಿಂದ ಬರುತ್ತಿದ್ದ ತೈಲ ತುಂಬಿದ ಟ್ಯಾಂಕರ್ ಕೂಡ ಹೆದ್ದಾರಿಯಿಂದ ಸರ್ವಿಸ್ ರಸ್ತೆ ದಾಟಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು, ರೈತರೊಬ್ಬರ ಜಮೀನಿಗೆ ನುಗ್ಗಿದೆ.
ವಾಹನದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅದರಂತೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಸಾರಿಗೆ ವಾಹನ ಮುಂದೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಟಾಟಾ ಏಸ್ ಕೂಡ ಅಪಘಾತಗೊಂಡಿದ್ದು ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹಿರೇಬಾಗೇವಾಡಿಯ ಸಮೀಪದ ಬಡೇಕೊಳ್ಳ ಕ್ರಾಸ್ ಬಳಿ ಬುಧವಾರ ರಾತ್ರಿ ಸರಣಿ ಅಪಘಾತ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.