ADVERTISEMENT

ಹುಕ್ಕೇರಿ | ಸಹಕಾರ ಸಂಘದ ಚುನಾವಣೆ: ಗ್ರಾಮಸ್ಥರ ಸಭೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 3:03 IST
Last Updated 6 ಸೆಪ್ಟೆಂಬರ್ 2025, 3:03 IST
ಹುಕ್ಕೇರಿ ತಾಲ್ಲೂಕಿನ ಗುಡಸ್ ಗ್ರಾಮದಲ್ಲಿ ಗ್ರಾಮಸ್ಥರು ರಮೇಶ್ ಕತ್ತಿ ಮತ್ತು ಎ.ಬಿ.ಪಾಟೀಲ ಬಣ ಬೆಂಬಲಿಸುತ್ತೇವೆಂದು ಪ್ರಮಾಣ ಮಾಡಿದರು
ಹುಕ್ಕೇರಿ ತಾಲ್ಲೂಕಿನ ಗುಡಸ್ ಗ್ರಾಮದಲ್ಲಿ ಗ್ರಾಮಸ್ಥರು ರಮೇಶ್ ಕತ್ತಿ ಮತ್ತು ಎ.ಬಿ.ಪಾಟೀಲ ಬಣ ಬೆಂಬಲಿಸುತ್ತೇವೆಂದು ಪ್ರಮಾಣ ಮಾಡಿದರು   

ಹುಕ್ಕೇರಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ ಮತ್ತು ಬಿಡಿಸಿಸಿ ಬ್ಯಾಂಕ್‌ಗೆ ಸಂಬಂಧಿತ ಚುನಾವಣೆಗೆ ಸ್ವಯಂ ಪ್ರೇರಣೆಯಿಂದ ಜನರು ಎ.ಬಿ.ಪಾಟೀಲ ಮತ್ತು ರಮೇಶ್ ಕತ್ತಿ ಗುಂಪಿಗೆ ಬೆಂಬಲ ಸೂಚಿಸಬೇಕು ಎಂದು ಸಭೆ ನಡೆಸುತ್ತಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ತಾಲ್ಲೂಕಿನ ಗುಡಸ್, ಶಿರಹಟ್ಟಿ ಬಿ.ಕೆ, ರಕ್ಷಿ, ಶಿರಗಾಂವ, ಅಮ್ಮಣಗಿ, ದಡ್ಡಿ ಭಾಗದ ಕೆಲ ಗ್ರಾಮಗಳಲ್ಲಿ, ಎಲಿಮುನ್ನೋಳಿ, ಸೋಲಾಪುರ ಗ್ರಾಮದಲ್ಲಿ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಸಭೆಯಲ್ಲಿ ಭಾಗಿಯಾಗಿ ಮುಂಬರುವ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆ ಪ್ರಯುಕ್ತ ರಮೇಶ ಕತ್ತಿ ಹಾಗೂ ಎ.ಬಿ. ಪಾಟೀಲರ ಪರವಾಗಿ ಬೆಂಬಲ ಸೂಚಿಸುವುದಾಗಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡರು.

ಮಾಜಿ ಸಚಿವ ಎ.ಬಿ.ಪಾಟೀಲ ದಡ್ಡಿ ಭಾಗದಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಲು ಹೋದಾಗ, ಮಹಿಳೆಯರು ಆರತಿ ಮಾಡಿ ಸ್ವಾಗತಿಸಿದರು. 

ಕೊನೆಯ ಗಳಿಗೆಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಅನಾವಶ್ಯಕ ಚುನಾವಣೆ ಬೇಡ. ಹೊಂದಾಣಿಕೆ ಮಾಡಿಕೊಂಡು ಹೋಗಿ ಎಂದು ಹೇಳುವ ಸ್ಥಿತಿಯಲ್ಲಿ ಈಗ ಯಾರು ಇಲ್ಲ ಎಂದು ಹೆಸರು ಹೇಳದ ಸಹಕಾರಿಯೊಬ್ಬರು ಅಭಿಮತ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.