ADVERTISEMENT

ಹುಕ್ಕೇರಿ: ಕೋರೆ ಸೊಸೈಟಿಗೆ ₹ 10.10 ಲಕ್ಷ ಲಾಭ

ಶಾಖೆಯ 3ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 2:05 IST
Last Updated 1 ಡಿಸೆಂಬರ್ 2025, 2:05 IST
ಹುಕ್ಕೇರಿಯಲ್ಲಿನ ಪ್ರಭಾಕರ ಕೋರೆ ಕೋ-ಆಪರೇಟಿವ್‌ ಕ್ರೆಡಿಟ್ ಸೊಸೈಟಿಯ ಹುಕ್ಕೇರಿ ಶಾಖೆಯಲ್ಲಿ ಜರುಗಿದ 3ನೇ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷ ಸದಾನಂದ ಕರಾಳೆ, ನಿರ್ದೇಶಕರು ಪಾಲ್ಗೊಂಡಿದ್ದರು
ಹುಕ್ಕೇರಿಯಲ್ಲಿನ ಪ್ರಭಾಕರ ಕೋರೆ ಕೋ-ಆಪರೇಟಿವ್‌ ಕ್ರೆಡಿಟ್ ಸೊಸೈಟಿಯ ಹುಕ್ಕೇರಿ ಶಾಖೆಯಲ್ಲಿ ಜರುಗಿದ 3ನೇ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷ ಸದಾನಂದ ಕರಾಳೆ, ನಿರ್ದೇಶಕರು ಪಾಲ್ಗೊಂಡಿದ್ದರು   

ಹುಕ್ಕೇರಿ: ಇಲ್ಲಿನ ಶಾಖೆ ಆರಂಭಿಸಿ ಮೂರು ವರ್ಷ ಪೂರ್ಣಗೊಂಡಿದ್ದು. ಆರಂಭದಿಂದ ಇಲ್ಲಿಯವರೆಗೆ ₹ 14.10 ಕೋಟಿ ಠೇವು ಹೊಂದಿದ ಸಹಕಾರಿ, ₹ 2.31 ಕೋಟಿ ಸಾಲ ವಿತರಿಸುವ ಮೂಲಕ ಆರ್ಥಿಕ ವರ್ಷದಲ್ಲಿ ₹ 10.10 ಲಕ್ಷ ಲಾಭ ಗಳಿಸಿದೆ ಎಂದು ಪ್ರಭಾಕರ ಕೋರೆ ಸೊಸೈಟಿ ಶಾಖೆ ಅಧ್ಯಕ್ಷ ಸದಾನಂದ ಕರಾಳೆ ಹೇಳಿದರು.

ಈಚೆಗೆ ಡಾ.ಪ್ರಭಾಕರ ಕೋರೆ ಕೋ-ಆಪರೇಟಿವ್‌ ಕ್ರೆಡಿಟ್ ಸೊಸೈಟಿಯ ಹುಕ್ಕೇರಿ ಶಾಖೆಯ 3ನೇ ವಾರ್ಷಿಕೋತ್ಸವ ಸಮಾರಂಭದ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸಹಕಾರಿಯ ಸಂಸ್ಥಾಪಕರು, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಬಹುರಾಜ್ಯ ನಿಯಮಾವಳಿಯ ಅಡಿ ಸ್ಥಾಪಿತವಾದ ಈ ಸೊಸೈಟಿ ರೈತರು, ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಆರ್ಥಿಕ ನೆರವು ಕಲ್ಪಿಸಿದೆ. ಚಿಕ್ಕೋಡಿಯ ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಬಾವನ್ ಸೌಂದತ್ತಿಯ ಶಿವಶಕ್ತಿ ಶುಗರ್ಸ್‌ಗೆ ಕಬ್ಬು ಪೂರೈಸಿದ ಹುಕ್ಕೇರಿ ಪಟ್ಟಣದ ಸುತ್ತಲಿನ ರೈತರಿಗೆ ಈ ಶಾಖೆಯಿಂದ ತ್ವರಿತವಾಗಿ ಕಬ್ಬಿನ ಬಿಲ್ ವಿತರಿಸಲಾಗುತ್ತಿದೆ’ ಎಂದರು.

ADVERTISEMENT

‘ಗ್ರಾಹಕರಿಗೆ ಅನುಕೂಲವಾಗಲು ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಆರ್.ಟಿ.ಜಿ.ಎಸ್, ನೆಫ್ಟ್‌, ಠೇವು ಸಂಗ್ರಹ, ವಿವಿಧ ರೀತಿಯ ಸಾಲ ವಿತರಣೆ ಹಾಗು ವಿಮೆಗಳಾದ ಸಾಮಾನ್ಯ ವಿಮೆ, ಆರೋಗ್ಯ ವಿಮೆ ಮತ್ತು ಜೀವ ವಿಮೆ ಸೇವೆ ಹಾಗೂ ಕಡಿಮೆ ಬಡ್ಡಿದರದಲ್ಲಿ ತ್ವರಿತವಾಗಿ ಬಂಗಾರ ಸಾಲ ಒದಗಿಸುತ್ತಿದ್ದು, ಗ್ರಾಹಕರು ಪ್ರಯೋಜನ ಪಡೆಯಬೇಕು’ ಎಂದು ವಿನಂತಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೇವೆಂದ್ರ ಕರೋಶಿ, ಶಾಖಾ ಅಭಿವೃದ್ಧಿ ಅಧಿಕಾರಿ ಪ್ರಧಾನಿ ಕುಂಬಾರ ಮತ್ತು ಶಾಖಾ ಸಲಹಾ ಸಮಿತಿ ಸದಸ್ಯರಾದ ಸಿದಗೌಡ ಪಾಟೀಲ, ಕೆಂಪಣ್ಣಾ ನೇರ್ಲಿ, ಬಸವರಾಜ ಪಾಟೀಲ, ಅಪ್ಪುಗೌಡ ಮಲಗೌಡನವರ, ಕಾಡಪ್ಪ ಮಲ್ಲಾಪುರೆ, ಅಡಿವೆಪ್ಪ ಗಡೆನ್ನವರ, ಶಶಿಧರ ಪುರಾಣಿಕ, ಅಣ್ಣಪ್ಪ ಕಮತೆ, ನಾರಾಯಣ ಬಡಿಗೇರ, ಶಾಖಾ ವ್ಯವಸ್ಥಾಪಕ ಸಚಿನ ಪಿಂಪಳಗಾವಿ, ಸಿಬ್ಬಂದಿ ವಿಶಾಲ ಪವಾರ, ಸಂದೀಪ ಪಾಟೀಲ, ಶಂಕರ ದೇಸಾಯಿ ಹಾಗೂ ಗ್ರಾಹಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.