ADVERTISEMENT

ಹುಕ್ಕೇರಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:24 IST
Last Updated 19 ಜೂನ್ 2025, 14:24 IST
ಸೈನಿಕ ಶಾಲೆಗೆ, ಮೊರಾರ್ಜಿ ವಸತಿ ಶಾಲೆಗೆ ಮತ್ತು ರಾಷ್ಟ್ರೀಯ ಮಿಲಟರಿ ಶಾಲೆಗೆ ಆಯ್ಕೆಯಾಗಿರುವ ಹುಕ್ಕೇರಿ ಎಸ್.ಕೆ.ಪಬ್ಲಿಕ್ ಸಿಬಿಎಸ್ಇ ಸ್ಕೂಲಿನ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಸತ್ಕರಿಸಿತು
ಸೈನಿಕ ಶಾಲೆಗೆ, ಮೊರಾರ್ಜಿ ವಸತಿ ಶಾಲೆಗೆ ಮತ್ತು ರಾಷ್ಟ್ರೀಯ ಮಿಲಟರಿ ಶಾಲೆಗೆ ಆಯ್ಕೆಯಾಗಿರುವ ಹುಕ್ಕೇರಿ ಎಸ್.ಕೆ.ಪಬ್ಲಿಕ್ ಸಿಬಿಎಸ್ಇ ಸ್ಕೂಲಿನ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಸತ್ಕರಿಸಿತು   

ಹುಕ್ಕೇರಿ: ಶಾಲೆಗಳಲ್ಲಿ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಕಡೆ ಗಮನ ಹರಿಸಿ ಅವರ ಶೈಕ್ಷಣಿಕ ಸುಧಾರಣೆಗೆ ಒಲವು ತೋರಬೇಕು ಎಂದು ಎಸ್.ಕೆ. ಪಬ್ಲಿಕ್ ಸಿಬಿಎಸ್ಇ ಸ್ಕೂಲಿನ ಅಧ್ಯಕ್ಷ ಚನ್ನಬಸಪ್ಪ (ಪಿಂಟು) ಶೆಟ್ಟಿ ಹೇಳಿದರು.

ಅವರು ಗುರುವಾರ ಸೈನಿಕ ಶಾಲೆಗೆ, ಮೊರಾರ್ಜಿ ವಸತಿ ಶಾಲೆಗೆ ಮತ್ತು ರಾಷ್ಟ್ರೀಯ ಮಿಲಟರಿ ಶಾಲೆಗೆ ಆಯ್ಕೆಯಾದ ಎಸ್.ಕೆ.ಪಬ್ಲಿಕ್ ಸಿಬಿಎಸ್ಇ ಸ್ಕೂಲಿನ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದರು.

ಪ್ರಾಚಾರ್ಯ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಪೈಪೋಟಿ ಸಮರ್ಥವಾಗಿ ಎದುರಿಸಲು ಸನ್ನದ್ಧರಾಗುವಂತೆ ‘ಶಾಲೆಯಲ್ಲಿ ಸ್ಪರ್ಧಾ’ತರಬೇತಿ ಕೇಂದ್ರ ತೆರೆದಿದ್ದು, ಅದರ ಮೂಲಕ ಎಂಟು ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಆಯ್ಕೆಯಾಗಿ ಶಾಲೆಯ ಹೆಸರು ತಂದಿದ್ದಾರೆ’ ಎಂದರು.

ADVERTISEMENT

ಸತ್ಕಾರ: ರಾಷ್ಟ್ರೀಯ ಮಿಲಿಟರಿ ಶಾಲೆಗೆ ರಾಜ್ಯಕ್ಕೆ 3ನೇ ಸ್ಥಾನ ಪಡೆದ ಆರವ್ ಹೆದ್ದೂರಶೆಟ್ಟಿ, ಜೀ ಕಟ್ಟಡ ವಾಹಿನಿಯಲ್ಲಿ ಅಂತಿಮ ಹಂತಕ್ಕೆ ತಲುಪಿದ ಅಮೋಘವರ್ಷ ದೇಶಪಾಂಡೆ, ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾದ ಸಂಜನಾ ವಾಜಂತ್ರಿ, ಶ್ಲೋಕ ಪಟ್ಟಣಶೆಟ್ಟಿ, ಸಮರ್ಥ ವಾಜಂತ್ರಿ, ತೇಜಸ್ ಬೆಟಗೇರಿ, ಅಕ್ಷತಾ ಮರಬಸನ್ನವರ ಅವರನ್ನು ಶಾಲೆ ವತಿಯಿಂದ ಸತ್ಕರಿಸಲಾಯಿತು.

ನಿರ್ದೇಶಕ ಓಂಕಾರ ಹೆದ್ದೂರಶೆಟ್ಟಿ, ಉಪಪ್ರಾಚಾರ್ಯೆ ಅನಿತಾ ದಳವಿ, ಶಿಕ್ಷಕರಾದ ರೋಹನ, ಸಂಪದಾ, ಕೋಚ್ ಶಾಹಿಲ್, ಪಾರ್ವತಿ, ಸುಶೀಲಾ, ಸಂಕರ ಅಲಗರಾಹುತ್ ಪಾಲ್ಗೊಂಡಿದ್ದರು. ಸಂಯೋಜಕಿ ಗಾಯತ್ರಿ ಕಲ್ಲೋಳಿ ಸ್ವಾಗತಿಸಿದರು. ಶಿಕ್ಷಕಿ ಕೀರ್ತಿ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.