ADVERTISEMENT

ವಿಮಾನ ಸೇವೆ: ಕನ್ನಡದಲ್ಲಿ ಮಾಹಿತಿ ನೀಡದ್ದಕ್ಕೆ ಐಎಎಸ್‌ ಅಧಿಕಾರಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 12:11 IST
Last Updated 16 ಡಿಸೆಂಬರ್ 2020, 12:11 IST
ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಟ್ವೀಟ್
ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಟ್ವೀಟ್   

ಬೆಳಗಾವಿ: ಕನ್ನಡದಲ್ಲಿ ಮಾಹಿತಿ ಕೊಡದ ಇಂಡಿಗೊ ಏರ್‌ಲೈನ್ಸ್ ವಿರುದ್ಧ ಹಿರಿಯ ಐಎಎಸ್ ಅಧಿಕಾರಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಎಲ್.ಕೆ.ಅತೀಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆ ವಿಮಾನದಲ್ಲಿ ಬುಧವಾರ ಬೆಂಗಳೂರಿನಿಂದ ಇಲ್ಲಿನ ಸಾಂಬ್ರಾಗೆ ಬಂದಿಳಿದ ಅವರು, ‘ಕರ್ನಾಟಕದಲ್ಲಿ ಇಂಡಿಗೊ ಹಾಗೂ ಇತರ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ನೀಡಲು ಇರುವ ಸಮಸ್ಯೆಯಾದರೂ ಏನು?’ ಎಂದು ಟ್ವೀಟ್ ಮಾಡುವ ಮೂಲಕ ಕೇಳಿದ್ದಾರೆ. ಈ ಅಧಿಕಾರಿಯ ಪ್ರಶ್ನೆಗೆ ಟ್ವಿಟ್ಟಿಗರು ಬೆಂಬಲ ವ್ಯಕ್ತಪಡಿಸಿದ್ದು, ಕನ್ನಡ ನೆಲದಲ್ಲೇ ಕನ್ನಡ ಬಳಸದಿರುವುದಕ್ಕೆ ವಿಮಾನಯಾನ ಕಂಪನಿಗಳ ವಿರುದ್ಧ ಆಕ್ರೋಶ ಪ್ರಕಟಿಸಿದ್ದಾರೆ.

‘ವಿದೇಶಿ ವಿಮಾನಯಾನ ಸಂಸ್ಥೆಗಳಾದ ಬ್ರಿಟಿಷ್ ಏರ್‌ವೇಸ್ ಎಮಿರೇಟ್ಸ್, ಸಿಂಗಾಪುರ್ ಏರ್‌ಲೈನ್ಸ್ ಕನ್ನಡದಲ್ಲಿ ಸೇವೆ ನೀಡುತ್ತವೆ. ಇಂಡಿಗೊ ಸಿಬ್ಬಂದಿ ಕ್ಯಾಬಿನ್ ಸಿಬ್ಬಂದಿಯು ಇಂಗ್ಲಿಷ್, ಹಿಂದಿ ಹಾಗೂ ಮಲಯಾಳಂ ಬಳಸುವುದಾದರೆ, ಕನ್ನಡದಲ್ಲಿ ಸೇವೆ ನೀಡದಿರುವುದು ಅಚ್ಚರಿ ಮೂಡಿಸುತ್ತದೆ’ ಎಂದು ಅತೀಕ್‌ ಮತ್ತೊಂದು ಟ್ವೀಟ್‌ನಲ್ಲಿ ಕೇಳಿದ್ದಾರೆ. ಕನ್ನಡದಲ್ಲೂ ಟ್ವೀಟ್ ಮಾಡಿದ್ದಾರೆ.

ADVERTISEMENT

‘ನೀವೇ ಸರ್ಕಾರಿ ಅಧಿಕಾರಿ ಇದ್ದೀರಿ. ಇಂತಹ ನಿರ್ಲಕ್ಷ್ಯ ವಹಿಸುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮಟ್ಟದಲ್ಲಿ ಮಾಡಬಾರದೇಕೆ?’ ಎಂದು ಕೆಲವರು ಅಧಿಕಾರಿಗೆ ಸಲಹೆಯನ್ನೂ ನೀಡಿದ್ದಾರೆ.

ಪ್ರತಿಕ್ರಿಯಿಸಿರುವ ವಿಮಾನ ಕಂಪನಿಯು, ‘ವಿಷಯವನ್ನು ಸಂಬಂಧಿಸಿದವರ ಗಮನಕ್ಕೆ ತರಲಾಗುವುದು’ ಎಂದು ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.