ADVERTISEMENT

ರಾಮದುರ್ಗ | ಮದ್ಯ ಅಕ್ರಮ ಸಾಗಣೆ: ಬಂಧನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 5:08 IST
Last Updated 25 ಮಾರ್ಚ್ 2023, 5:08 IST
ಯರಗಟ್ಟಿ– ಗೋಕಾಕ ರಸ್ತೆಯಲ್ಲಿ ಶುಕ್ರವಾರ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿ ಲಕ್ಷ್ಮಣ ಅವರನ್ನು ರಾಮದುರ್ಗದ ಅಬಕಾರಿ ಪಿಎಸ್‌ಐ ಆರ್‌.ಎಸ್‌. ಮುದಿಗೌಡರ ನೇತೃತ್ವದ ತಂಡ ಬಂಧಿಸಿದೆ
ಯರಗಟ್ಟಿ– ಗೋಕಾಕ ರಸ್ತೆಯಲ್ಲಿ ಶುಕ್ರವಾರ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿ ಲಕ್ಷ್ಮಣ ಅವರನ್ನು ರಾಮದುರ್ಗದ ಅಬಕಾರಿ ಪಿಎಸ್‌ಐ ಆರ್‌.ಎಸ್‌. ಮುದಿಗೌಡರ ನೇತೃತ್ವದ ತಂಡ ಬಂಧಿಸಿದೆ   

ರಾಮದುರ್ಗ (ಬೆಳಗಾವಿ ಜಿಲ್ಲೆ): ಯರಗಟ್ಟಿ– ಗೋಕಾಕ ರಸ್ತೆಯಲ್ಲಿ ಶುಕ್ರವಾರ ಕಾರಿನಲ್ಲಿ ಅಕ್ರಮವಾಗಿ ಮದ್ಯದ ಬಾಕ್ಸ್‌ಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ರಾಮದುರ್ಗ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಲಕ್ಷ್ಮಣ ಅವರಿಂದ 25 ಮದ್ಯದ ಬಾಕ್ಸ್‌ ಹಾಗೂ ಕಾರು ಸೇರಿ ₹ 3.86 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಪಿಎಸ್‌ಐ ಆರ್.ಎಸ್. ಮುದಿಗೌಡರ ನೇತೃತ್ವದ ತಂಡ ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT