
ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಮರಕುಂಬಿ ಗ್ರಾಮದ ಬಳಿಯ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಕಬ್ಬಿನ ಹಾಲು ಕುದಿಯುವ ಎವಿಸಿಪಿ ನಂ-1ರ ಕಂಪಾರ್ಟ್‌ಮೆಂಟ್ ವಾಲ್ವ್ ದುರಸ್ತಿ ವೇಳೆ ಕುದಿಯುವ ಪದಾರ್ಥ ಸೋರಿ ಮೂವರು ಕಾರ್ಮಿಕರು ಮೃತಪಟ್ಟು, ಐವರಿಗೆ ಗಂಭೀರ ಗಾಯಗಳಾಗಿವೆ.
ವಾಲ್ವ್ ದುರಸ್ತಿ ಮಾಡುತ್ತಿದ್ದ ಜಮಖಂಡಿಯ ಅಕ್ಷಯ್ ಚೋಪಡೆ (45), ನೇಸರಗಿಯ ದೀಪಕ ಮುನವಳ್ಳಿ (31), ಖಾನಾಪುರ ತಾಲ್ಲೂಕಿನ ಚಿಕ್ಕಮುನವಳ್ಳಿಯ ಸುದರ್ಶನ ಬನೋಶಿ (25) ಮೃತರು.
‘ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತ್ ಬಸಪ್ಪ ಸಾರವಾಡಿ (27), ಗೋಕಾಕದ ರಾಘವೇಂದ್ರ ಗಿರಿಯಾಳ (35), ಅಥಣಿಯ ಮಂಜು ತೇರದಾಳ (35), ಬೈಲಹೊಂಗಲ ಅರವಳ್ಳಿಯ ಮಂಜು ಕಾಜಗಾರ (28), ಬಾಗಲಕೋಟೆ ಮರೆಗುದ್ದಿ ಗುರು ತಮ್ಮಣ್ಣವರ ಗಾಯಗೊಂಡಿದ್ದಾರೆ. ಕಾರ್ಮಿಕರ ದೇಹಗಳು ಸುಟ್ಟಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮುರುಗೋಡ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಕಾರ್ಖಾನೆ ಆವರಣದಲ್ಲಿ 40 ಅಡಿ ಎತ್ತರದ ಎವಿಸಿಪಿ ನಂ-1ರ ಕಂಪಾರ್ಟ್‌ಮೆಂಟ್‌ನ ವಾಲ್ವ್ ದುರಸ್ತಿ ನಡೆದಿತ್ತು. ಅದಕ್ಕೂ ಮುನ್ನ ಎವಿಸಿಪಿ ನಂ.1 ಬಂದ್ ಮಾಡಲಾಗಿತ್ತು. ವಾಲ್ವ್‌ನ ನಟ್–ಬೋಲ್ಟ್ ತೆಗೆದು ದುರಸ್ತಿ ಮಾಡುವಾಗ ಏಕಾಏಕಿ ಬಿಸಿ ಪದಾರ್ಥ ಕಾರ್ಮಿಕರ ಮೈಮೇಲೆ ಹೇಗೆ ಬಿತ್ತು ಎನ್ನುವುದು ತಿಳಿದಿಲ್ಲ’ ಎಂದು ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದರು. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಕರೆ ಕಾರ್ಖಾನೆಯಲ್ಲಿ ಕುದಿಯುವ ಪದಾರ್ಥ ಬಿದ್ದು ಘಟನೆ ಸಂಭವಿಸಿದೆ. ಘಟನೆ ಹೇಗಾಯಿತು ಕಾರಣ ಏನೆಂದು ತನಿಖೆಯ ಬಳಿಕ ಗೊತ್ತಾಗಲಿದೆಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.