ಹುಕ್ಕೇರಿ: ತಾಲ್ಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ತಮ್ಮ ಕಾರ್ಯದಕ್ಷತೆ ಮೂಲಕ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತಿ ಹೊಂದುತ್ತಿರುವ ಸಾತಪ್ಪ ಕರ್ಕಿನಾಯಿಕ ಅವರು ರೈತನ ಮಗ ಕಾರ್ಖಾನೆ ಎಂಡಿ ಆಗಿದ್ದು ಶ್ಲಾಘನೀಯ ಎಂದು ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಹೇಳಿದರು.
ಶನಿವಾರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪ ಕರ್ಕಿನಾಯಿಕ ಸೇವಾ ನಿವೃತ್ತರಾದ ಅಂಗವಾಗಿ ಆಡಳಿತ ಮಂಡಳಿ ಪರವಾಗಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ನಿರ್ದೇಶಕ ಶಿವನಾಯಿಕ ನಾಯಿಕ ಮಾತನಾಡಿ, ಬಸವ ತತ್ವದ ಅನುಯಾಯಿ ಎಸ್.ಆರ್. ಕರ್ಕಿನಾಯಿಕ ಕಾಯಕದ ಮೂಲಕ ಕಾರ್ಖಾನೆಯ ಪ್ರಗತಿಗೆ ಸೇವೆ ಸಲ್ಲಿಸಿದ್ದು ಸ್ಮರಣೀಯ ಎಂದರು. ನಿರ್ದೇಶಕ ಬಾಬಾಸಾಹೇಬ ಅರಬೋಳೆ ಮಾತನಾಡಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಸಾತಪ್ಪ ಕರ್ಕಿನಾಯಿಕ, ವಿವಿಧ ಹುದ್ದೆಗಳಲ್ಲಿ 28 ವರ್ಷ ಕಾರ್ಯನಿರ್ವಹಿಸಿದ್ದ ನನಗೆ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ಒದಗಿ ಬಂದಿದ್ದು ನನ್ನ ಸೌಭಾಗ್ಯ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಸೇವಾ ನಿವೃತ್ತಿ ಹೊಂದಿದ 11 ಜನ ಸಿಬ್ಬಂದಿಯನ್ನು ಸತ್ಕರಿಸಲಾಯಿತು.
ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ನಿರ್ದೇಶಕರಾದ ಬಸವರಾಜ ಮರಡಿ, ಪ್ರಭುದೇವ ಪಾಟೀಲ, ಸುರೇಂದ್ರ ದೊಡಲಿಂಗನವರ, ಜನರಲ್ ಮ್ಯಾನೇಜರ ವೀರನಗೌಡ ದೇಸಾಯಿ, ಕಾರ್ಮಿಕ ಸಂಘಟನೆ ಅಧ್ಯಕ್ಷ ಮೋಹನ ಕೋಠಿವಾಲೆ, ಆಡಳಿತಾಧಿಕಾರಿ ರವೀಂದ್ರ ಚೌಗಲಾ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.
ಎಂ.ಪಿ.ದೇಸಾಯಿ ಸ್ವಾಗತಿಸಿದರು. ಲಕ್ಷ್ಮಣ ಹಂಚಿನಮನಿ ನಿರೂಪಿಸಿದರು. ಕಚೇರಿ ಅಧೀಕ್ಷಕ ಸುಭಾಷ ನಾಶಿಪುಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.