ADVERTISEMENT

ಮತ ಕಳವು ಮಾಡಿ ಗೆದ್ದಿದ್ದು ಸಿದ್ದರಾಮಯ್ಯ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 18:38 IST
Last Updated 9 ಆಗಸ್ಟ್ 2025, 18:38 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಬೆಳಗಾವಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದ್ದ ಬಾದಾಮಿ ಕ್ಷೇತ್ರದಲ್ಲಿ 3,000 ಮತಗಳನ್ನು ಖರೀದಿಸಿ, ಗೆಲ್ಲಿಸಿದ್ದಾಗಿ ಅವರ ಸಹರ್ತಿಗಳೇ ಹೇಳಿದ್ದಾರೆ. ಈ ಬಗ್ಗೆ ಸಿ.ಎಂ ಬಾಯಿ ಬಿಚ್ಚಬೇಕು’ ಎಂದು ಸಂಸದ ಜಗದೀಶ ಶೆಟ್ಟರ್‌ ಸವಾಲು ಹಾಕಿದರು.

‘ಆಗ ಸಿದ್ದರಾಮಯ್ಯ ಅವರೊಂದಿಗೆ ಇದ್ದ ಸಿ.ಎಂ. ಇಬ್ರಾಹಿಂ ಹಾಗೂ ಬಿ.ಬಿ. ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ ಮತ ಖರೀದಿಸಿದ್ದರು. ಇದನ್ನು ಖುದ್ದಾಗಿ ಇಬ್ರಾಹಿಂ ಅವರೇ ಹೇಳಿದ್ದಾರೆ. ಮತಗಳ್ಳತನದ ಬಗ್ಗೆ ಬಾಯಿ ಬಡಿದುಕೊಳ್ಳುತ್ತಿರುವ ಸಿದ್ದರಾಮಯ್ಯ ಏನು ಹೇಳುತ್ತಾರೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ರಾಹುಲ್ ಗಾಂಧಿ ಅವರಂಥ ಅಪ್ರಬುದ್ಧ ವಿಪಕ್ಷ ನಾಯಕ. ಮತಗಳ್ಳತನ ನಡೆದಿರುವ ಬಗ್ಗೆ ಖಾತ್ರಿ ಇದ್ದರೆ, ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಬೇಕಿತ್ತು’ ಎಂದರು.

ADVERTISEMENT
ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತದಾರರ ಪಟ್ಟಿಯಲ್ಲಿನ ದೋಷ ಕುರಿತು ಚುನಾವಣೆ ಆಯುಕ್ತರ ಮತ್ತು ಕೇಂದ್ರ ಸರ್ಕಾರದ ಚುನಾವಣೆ ನೀತಿ ಖಂಡಿಸಿ ಅಂಕಿಅಂಶಗಳ ಮೂಲಕ ಸಾಬೀತು ಮಾಡಿ ಪ್ರತಿಭಟಿಸಿದ್ದು ಸರಿಯಿದೆ.
-ದಿನೇಶ ಗುಂಡೂರಾವ್ ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.