ADVERTISEMENT

ಅಮೆರಿಕಕ್ಕೆ ಸಂಸದ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:12 IST
Last Updated 24 ಜೂನ್ 2025, 16:12 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಬೆಳಗಾವಿ: ವೀರಶೈವ ಸಮಾಜ ಆಫ್‌ ನಾರ್ಥ್‌ ಅಮೆರಿಕ ವತಿಯಿಂದ ಜುಲೈ 4ರಿಂದ 6ರವರೆಗೆ ನಡೆಯಲಿರುವ ‘ಶರಣ ಸಂಗಮ’ 47ನೇ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಲು ಸಂಸದ ಜಗದೀಶ ಶೆಟ್ಟರ್‌ ಅವರು, ಜೂನ್‌ 25ರಂದು ಮುಂಬೈ ಮಾರ್ಗವಾಗಿ ಅಮೆರಿಕಕ್ಕೆ ಪ್ರಯಾಣ ಬೆಳಸುವರು.

ಈ ಸಮಾವೇಶದಲ್ಲಿ ‘ಶರಣ ಸಿದ್ಧಾಂತ’ ವಿಷಯದ ಕುರಿತಾಗಿ ಯುವಜನರು ಮತ್ತು ಮಕ್ಕಳನ್ನು ಉದ್ದೇಶಿಸಿ ಮಾತನಾಡಲಿರುವ ಅವರು, ಜುಲೈ 17ರಂದು ಭಾರತಕ್ಕೆ ಮರಳುವರು. ಪತ್ನಿ ಶಿಲ್ಪಾ ಕೂಡ ಅವರೊಂದಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT