ADVERTISEMENT

‘ಜಾನಪದದ ತತ್ವ ಆದರ್ಶವಾದುದು’

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 12:38 IST
Last Updated 24 ಫೆಬ್ರುವರಿ 2021, 12:38 IST
ಬೆಳಗಾವಿಯಲ್ಲಿ ಜಿಲ್ಲಾ ಲೇಖಕಿಯರ ಸಂಘದಿಂದ  ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಹೇಮಾವತಿ ಸೋನೊಳ್ಳಿ ಅವರನ್ನು ಸನ್ಮಾನಿಸಲಾಯಿತು
ಬೆಳಗಾವಿಯಲ್ಲಿ ಜಿಲ್ಲಾ ಲೇಖಕಿಯರ ಸಂಘದಿಂದ  ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಹೇಮಾವತಿ ಸೋನೊಳ್ಳಿ ಅವರನ್ನು ಸನ್ಮಾನಿಸಲಾಯಿತು   

ಬೆಳಗಾವಿ: ‘ಜಾನಪದ ತತ್ವಗಳನ್ನು ಸಾರುತ್ತದೆ. ಅದು ಆದರ್ಶವಾದುದು’ ಎಂದು ನಾಟಕಕಾರ ಬಿ.ಆರ್. ಪೊಲೀಸ ಪಾಟೀಲ ಹೇಳಿದರು.

ಜಿಲ್ಲಾ ಲೇಖಕಿಯರ ಸಂಘದಿಂದ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾನಪದ ಸದಾ ಜೀವಂತವಾಗಿರಬೇಕು. ಅರಿವಿನ ಕಣ್ಣು ತೆರೆದು ನಾವು ಮುನ್ನಡೆಯಬೇಕು. ಮುಖದ ಮೇಲೆ ನಗು ಹಾಗೂ ಮಗುವಿನ ಮುಗ್ಧತೆ ಇದ್ದರೆ ಎಲ್ಲ ಕಾಲದಲ್ಲೂ ಒಳಿತಾಗುತ್ತದೆ’ ಎಂದರು.

ADVERTISEMENT

ಡಾ.ಹೇಮಾವತಿ ಸೋನೊಳ್ಳಿ ಅವರನ್ನು ಸನ್ಮಾನಿಸಲಾಯಿತು.

ದತ್ತಿ ದಾನಿಗಳಾದ ಸುಮಾ ಕಿತ್ತೂರ, ಸುನಂದಾ ಎಮ್ಮಿ, ರತ್ನಪ್ರಭಾ ಬೆಲ್ಲದ, ಆಶಾ ಪಾಟೀಲ ಹಾಘೂ ಆರತಿ ಅಂಗಡಿ, ಲೇಖಕಿಯರ ಸಂಘದ ಸದಸ್ಯರಾದ ಜಯಶೀಲಾ ಬ್ಯಾಕೋಡ, ದೀಪಿಕಾ ಚಾಟೆ, ವಿದ್ಯಾ ಹುಂಡೇಕರ, ಮಾಧವಿ ಸಂಬರಗಿ, ಜಯಾ ಚುನಮರಿ, ಅಕ್ಕಮಹಾದೇವಿ ಹುಲಗಬಾಳಿ, ಸರ್ವಮಂಗಳಾ ಅರಳಿಮಟ್ಟಿ, ಸುನಂದಾ ಹಾಲಭಾವಿ, ಮಹಾನಂದಾ ಪರುಶೆಟ್ಟಿ, ಪ್ರಭಾ ಪಾಟೀಲ, ಶಾಲಿನಿ ಚಿನಿವಾರ, ಸುನಿತಾ ನಂದೆಣ್ಣವರ, ಮೇಘಾ ಪಾಟೀಲ, ಹೀರಾ ಚೌಗಲೆ, ಅನ್ನಪೂರ್ಣಾ ಹಿರೇಮಠ, ಅನಿತಾ ಮಾಲಗತ್ತಿ, ಅಕ್ಕಮಹಾದೇವಿ ತಗ್ಗಿ, ಶೈಲಜಾ ಭಿಂಗೆ, ಎಲ್.ಎಸ್. ಶಾಸ್ತ್ರಿ, ಪ್ರೇಮಾ ತಹಶೀಲ್ದಾರ್, ಅಶೋಕ ಮಳಗಲಿ, ಪ್ರಕಾಶ ದೇಶಪಾಂಡೆ, ಉಮಾ ಅಂಗಡಿ, ಪಾಂಡುರಂಗ ಯಲಿಗಾರ, ಡಿ.ಎಂ. ಪಾಟೀಲ, ನಿರ್ಮಲಾ ಬಟ್ಟಲ, ವೈಶಾಲಿ ಭರಬರಿ, ಭುವನೇಶ್ವರಿ ಪೂಜಾರಿ, ಲಲಿತಾ ಪರ್ವತರಾವ ಇದ್ದರು.

ಸುಪ್ರಿಯಾ ದೇಶಪಾಂಡೆ ಪ್ರಾರ್ಥಿಸಿದರು. ಜ್ಯೋತಿ ಬಾದಾಮಿ ಸ್ವಾಗತಿಸಿದರು.ರಾಜನಂದಾ ಘಾರ್ಗಿ ನಿರೂಪಿಸಿದರು. ಇಂದಿರಾ ಮೋಟೆಬೆನ್ನೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.