ADVERTISEMENT

‘ಹಬ್ಬಗಳು ಆರೋಗ್ಯಪೂರ್ಣ ಸಮಾಜದ ಬುನಾದಿ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 12:17 IST
Last Updated 27 ಜನವರಿ 2020, 12:17 IST
ಬೆಳಗಾವಿಯ ಕ್ರಾಂತಿ ಮಹಿಳಾ ಮಂಡಳದಿಂದ ಸೋಮವಾರ ಆಯೋಜಿಸಿದ್ದ ಜನಪದ ಸಂಗೀತ ಕಾರ್ಯಕ್ರಮವನ್ನು ಡಾ.ಮಾಧುರಿ ಹೆಬ್ಬಾಳಕರ ಉದ್ಘಾಟಿಸಿದರು
ಬೆಳಗಾವಿಯ ಕ್ರಾಂತಿ ಮಹಿಳಾ ಮಂಡಳದಿಂದ ಸೋಮವಾರ ಆಯೋಜಿಸಿದ್ದ ಜನಪದ ಸಂಗೀತ ಕಾರ್ಯಕ್ರಮವನ್ನು ಡಾ.ಮಾಧುರಿ ಹೆಬ್ಬಾಳಕರ ಉದ್ಘಾಟಿಸಿದರು   

ಬೆಳಗಾವಿ: ‘ಭಾರತೀಯ ಸಂಸ್ಕೃತಿಯಲ್ಲಿ ಆಚರಿಸುವ ಎಲ್ಲ ಹಬ್ಬ–ಹರಿದಿನಗಳು ಸುಂದರ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಡಾ.ಮಾಧುರಿ ಹೆಬ್ಬಾಳಕರ ಹೇಳಿದರು.

ಇಲ್ಲಿನ ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನ, ಹಿಂದ್‌ ಕೋ ಆಪರೇಟಿವ್‌ ಹೌಸಿಂಗ್‌ ಸೊಸೈಟಿಯ ಮಹಿಳಾ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಜನಪದ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮೆಲ್ಲ ಹಬ್ಬಗಳ ಆಚರಣೆಯ ಹಿಂದೆ ವೈಜ್ಞಾನಿಕ, ಭೌಗೋಳಿಕವಾದ ಕಾರಣಗಳೂ ಇವೆ’ ಎಂದರು.

ADVERTISEMENT

ಪೌಷ್ಟಿಕ ಅಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು. 30 ಮಹಿಳೆಯರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶೈಲಾ ಪಾಟೀಲ, ಭಾರತಿ ರಾಮಗೊಂಡ ನಿರ್ಣಾಯಕರಾಗಿದ್ದರು.

ಉಮಾ ಸಂಗೀತ ಪ್ರತಿಷ್ಠಾನದ ಅಧ್ಯಕ್ಷೆ ಮಂಗಲ ಮಠದ, ಆಶಾ ನಿಲಜಗಿ, ವೈಶಾಲಿ ಕಳ್ಳಿಮನಿ ಇದ್ದರು.

ಸೌಭಾಗ್ಯಾ ಗುಂಡ, ಸರಿತಾ ದರಗಶೆಟ್ಟಿ, ಲೀಲಾ ಶೇರಿ, ಪದ್ಮಾ ರಂಗೋಳಿ ಪ್ರಾರ್ಥನಾ ಗೀತೆ ಹಾಡಿದರು. ಕ್ರಾಂತಿ ಮಹಿಳಾ ಮಂಡಳದ ಅಧ್ಯಕ್ಷೆ ಶೋಭಾ ಕಾಡನ್ನವರ ಸ್ವಾಗತಿದರು. ಕಾರ್ಯದರ್ಶಿ ದರ್ಶನಾ ನಿಲಜಗಿ ಪ್ರಾಸ್ತಾವಿಕ ಮಾತನಾಡಿದರು. ಪದ್ಮಜಾ ತುರಮಂದಿ ಪರಿಚಯಿಸಿದರು. ಸ್ವಪ್ನಾ ಚೌಗಲೆ ಮತ್ತು ಪದ್ಮಾ ಚೌಗಲೆ ನಿರೂಪಿಸಿದರು. ಪುಷ್ಪಾ ಜೀರಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.