ಮೂಡಲಗಿ: ಮೂಡಲಗಿ ತಾಲ್ಲೂಕಿನ ಮಸುಗಪ್ಪಿಯ ಶಕ್ತಿ ದೇವತೆ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಭೇಟಿ ನೀಡಿ ದೇವಿ ದರ್ಶನ ಪಡೆದರು.
ಲಕ್ಷ್ಮೀದೇವಿ ದೇವಸ್ಥಾನದ ಟ್ರಸ್ಟ್ ಸಮಿತಿಯವರು ನೀಡಿದ ಸನ್ಮಾನವನ್ನು ಸ್ವೀಕರಿಸಿದ ಶಾಸಕ ರಮೇಶ ಜಾರಕಿಹೊಳಿ ಅವರು ಮಾತನಾಡಿ ’ಭಕ್ತರೆಲ್ಲರೂ ಸೇರಿ ನಿರ್ಮಿಸಿದ ಲಕ್ಷ್ಮೀದೇವಿ ದೇವಸ್ಥಾನವು ದೈವಿ ಸ್ವರೂಪಿಯಾಗಿದ್ದು, ಮಾದರಿಯಾಗಿದೆ. ದೇವಿ ದರ್ಶನದಿಂದ ಹರ್ಷವಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡ್ನಿಂಗಗೋಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಭುಜನ್ನವರ, ಸಂಜಯ ಹೊಸಕೋಟಿ, ಭರಮಪ್ಪ ಗಂಗಣ್ಣವರ, ಲಕ್ಷ್ಮಣ ನರಗುಂದ, ಭರಮಪ್ಪ ಅಶಿರೊಟ್ಟಿ, ಆನಂದ ಹೊಸಕೋಟಿ, ಬಸಯ್ಯ ಹಿರೇಮಠ, ಮುರಗೆಪ್ಪ ಗಾಡವಿ, ಭೀಮಶಿ ಆಶಿರೊಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.