
ಪ್ರಜಾವಾಣಿ ವಾರ್ತೆ
ಬೆಳಗಾವಿ: ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ ಮೇಲೆ ನುಗ್ಗಾನಟ್ಟಿ ಕ್ರಾಸ್ ಬಳಿ ಜೀಪ್ ಹಾಗೂ ಬೈಕ್ ವೀಲಿಂಗ್ ಮಾಡುತ್ತಿದ್ದ ಏಳು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿಗಳು ತಮ್ಮ ಸ್ನೇಹಿತ ಯರಗಟ್ಟಿಯ ಸುರೇಶ ಗುರುನಾಥ ಭಜಂತ್ರಿ ಎಂಬಾತನ ಜನ್ಮದಿನದ ಮೋಜಿಗಾಗಿ, ವೀಲಿಂಗ್ ಮಾಡಿದ ವಿಡಿಯೊಗಳನ್ನು ಎಸ್.ಬಿ.ಸರ್ಕಾರ್ ಎಂಬ ಇನ್‌ಸ್ಟಾಗ್ರಾಂ ಪೇಜಿನಲ್ಲಿ ಹಾಕಿಕೊಂಡಿದ್ದರು. ಬಂಧಿತರಿಂದ ಒಂದು ಜೀಪ್, ಎರಡು ಕಾರ್, ನಾಲ್ಕು ಬೈಕ್ ವಶಕ್ಕೆ ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.