ADVERTISEMENT

ಫೆ.2ರಂದು ನಿಪ್ಪಾಣಿಯಲ್ಲಿ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 4:23 IST
Last Updated 30 ಜನವರಿ 2026, 4:23 IST
ಡಾ. ಸಿದ್ಧಗೌಡ ಪಾಟೀಲ
ಡಾ. ಸಿದ್ಧಗೌಡ ಪಾಟೀಲ   

ನಿಪ್ಪಾಣಿ: ಸ್ಥಳೀಯ ವಿಎಸ್‍ಎಂ ಬಿಬಿಎ, ಬಿಸಿಎ ಮತ್ತು ಪದವಿ ಮಹಾವಿದ್ಯಾಲಯ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಿಪ್ಲೋಮಾ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ಫೆ.2ರಂದು ಮುಂ.9.30ಕ್ಕೆ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಡಿಪ್ಲೊಮಾ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ಸ್, ಮೆಕಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 2020 ರಿಂದ 2026ರ ವರೆಗಿನ ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಬಿ.ಕಾಂ., ಬಿಬಿಎ, ಬಿಬಿಎಂ, ಬಿಎ, ಬಿ.ಎಸ್ಸಿ., ಬಿಸಿಎ ಮಹಾವಿದ್ಯಾಲಯದಲ್ಲಿ 2020 ರಿಂದ 2026ರ ವರೆಗಿನ ಉತ್ತೀರ್ಣರಾದ ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅಂತಿಮ ವರ್ಷದಲ್ಲಿಯ ವಿದ್ಯಾರ್ಥಿಗಳೂ ಸಹ ಭಾಗವಹಿಸಬಹುದು ಎಂದು ವಿಎಸ್‍ಎಂ ಗ್ರುಪ್ ಆಫ್ ಇನ್‌ಸ್ಟಿಟ್ಯೂಶನ್  ಸಿಇಓ ಡಾ. ಸಿದ್ಧಗೌಡ ಪಾಟೀಲ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಹೆಚಿನ ಮಾಹಿತಿಗಾಗಿ 9620131146ಗೆ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT