ADVERTISEMENT

ಬಹುತೇಕ ಜಿಲ್ಲೆಗಳಲ್ಲಿ ನ್ಯಾಯಾಂಗ ಅಧಿಕಾರಿಗಳ ಹುದ್ದೆ ಖಾಲಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:12 IST
Last Updated 17 ಜನವರಿ 2022, 16:12 IST

ಬೆಳಗಾವಿ: ಬೆಂಗಳೂರು ನಗರದಲ್ಲಿರುವ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಂಗ ಅಧಿಕಾರಿಗಳ 60 ಹುದ್ದೆಗಳು ಖಾಲಿ ಇವೆ ಎಂದು ಹೈಕೋರ್ಟ್‌ ಮಾಹಿತಿ ನೀಡಿದೆ.

ಅಥಣಿಯ ವಕೀಲ ಭೀಮನಗೌಡ ಪರಗೊಂಡ ಅವರು ಆರ್‌ಟಿಐ ಕಾಯ್ದೆಯಲ್ಲಿ ಸಲ್ಲಿಸಿದ್ದ ಅರ್ಜಿ ಪರಿಗಣಿಸಿ ವಿವರ ಕೊಡಲಾಗಿದೆ. ಹೈಕೋರ್ಟ್‌ ಅಧೀನದಲ್ಲಿ ಬರುವ ಜಿಲ್ಲಾ, ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ ನ್ಯಾಯಾಲಯಗಳಲ್ಲಿ ಖಾಲಿ ಇರುವ ನ್ಯಾಯಾಂಗ ಅಧಿಕಾರಿ (ಜುಡಿಷಿಯಲ್ ಆಫೀಸರ್ಸ್‌), ಶಿರಸ್ತೇದಾರ, ಶೀಘ್ರ ಲಿಪಿಗಾರ, ಬೆರಳಚ್ಚುಗಾರ, ಆದೇಶ ಜಾರಿಕಾರರು ಹಾಗೂ ಡಿ ಗ್ರೂಪ್‌ ಹುದ್ದೆಗಳ ಮಾಹಿತಿಯನ್ನು ಪರಗೊಂಡ ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಹೈಕೋರ್ಟ್‌, ಬೆಂಗಳೂರು ಗ್ರಾಮಾಂತರದಲ್ಲಿ 36, ಬಾಗಲಕೋಟೆ–1, ಬಳ್ಳಾರಿ–3, ಬೆಳಗಾವಿ–16, ಬೀದರ್–2, ಚಾಮರಾಜನಗರ–1, ಚಿಕ್ಕಬಳ್ಳಾಪುರ–2, ಚಿಕ್ಕಮಗಳೂರು–5, ಚಿತ್ರದುರ್ಗ–4, ದಕ್ಷಿಣ ಕನ್ನಡ–8, ದಾವಣಗೆರೆ–5, ಧಾರವಾಡ–3, ಗದಗ–1, ಹಾಸನ, ಹಾವೇರಿ, ಕೊಡಗು ತಲಾ–4, ಕಲಬುರಗಿ–8, ಕೋಲಾರ–9, ಮಂಡ್ಯ–15, ಮೈಸೂರು–17, ರಾಯಚೂರು–3, ರಾಮನಗರ–7, ಶಿವಮೊಗ್ಗ–5, ತುಮಕೂರು–7, ಉಡುಪಿ–6, ಉತ್ತರ ಕನ್ನಡ–7, ವಿಜಯಪುರ–2 ಮತ್ತು ಯಾದಗಿರಿಯಲ್ಲಿ 3 ನ್ಯಾಯಾಂಗ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಒಒಡಿ ಅಧಿಕಾರಿಗಳ 50 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.