ADVERTISEMENT

ಐನಾಪುರ: ಅಂಗವಿಕಲರಿಗೆ ಕಬಡ್ಡಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 14:23 IST
Last Updated 11 ಜೂನ್ 2019, 14:23 IST

ಅಥಣಿ: ‘ಉತ್ತರ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಅಂಗವಿಕಲರಿಗಾಗಿ ರಾಜ್ಯ ಮಟ್ಟದ ಮುಕ್ತ ಕಬಡ್ಡಿ ಟೂರ್ನಿಯನ್ನು ಜೂನ್ 30ರಂದು ತಾಲ್ಲೂಕಿನ ಐನಾಪುರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ’ ಎಂದು ಐನಾಪುರ ಜನಧ್ವನಿ ವೇದಿಕೆ ಮುಖ್ಯಸ್ಥ ರಮೇಶ ನಾಯಿಕ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಂಗವಿಕಲರು ದೈಹಿಕವಾಗಿ ವಿಕಲಾಂಗರಾಗಿದ್ದರೂ ಮಾನಸಿಕವಾಗಿ ಸದೃಢವಿರುತ್ತಾರೆ. ಅವರಲ್ಲಿ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅವರು ಕೂಡ ಇತರರಂತೆ ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವ ಹೊಂದಲಿ ಎಂಬ ಉದ್ದೇಶದಿಂದ ಟೂರ್ನಿ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಪ್ರಥಮ ಬಹುಮಾನವಾಗಿ ₹ 15ಸಾವಿರ, ದ್ವಿತೀಯ ₹ 10ಸಾವಿರ ಹಾಗೂ ತೃತೀಯ ₹ 7ಸಾವಿರ ಬಹುಮಾನದೊಂದಿಗೆ ಟ್ರೋಫಿಗಳನ್ನು ನೀಡಲಾಗುವುದು. 18 ವರ್ಷ ಮೇಲ್ಪಟ್ಟವರು ಜೂನ್ 25ರ ಒಳಗೆ ಹೆಸರು ನೋಂದಾಯಿಸಬೇಕು. ಪ್ರವೇಶ ಶುಲ್ಕ ಇರುವುದಿಲ್ಲ. ಗಾಲಿ ಕುರ್ಚಿ ಬಳಸಲು ಅವಕಾಶವಿರುವುದಿಲ್ಲ’ ಎಂದು ತಿಳಿಸಿದರು. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 7022850565 ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.