
ಕಾಗವಾಡ: ಪ್ರಾಚೀನ ಯುಗದಲ್ಲಿ ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತು ಸಮಾಜದಲ್ಲಿತ್ತು. ಆದರೆ ಈಗ ಬದಲಾವಣೆಯಾಗಿ ಉದ್ಯೋಗ ಮನುಷ್ಯ ಲಕ್ಷಣಂ ಆಗಿದೆ. ಮನಸ್ಸು ಮಾಡಿದ್ದಾರೆ ಯಾವ ಉದ್ಯೋಗವನ್ನು ಯಾರು ಬೇಕಾದರು ಮಾಡಬಹುದು. ಆದರೆ ನಮಗೆ ಮನಸ್ಸು ಬೇಕು. ಅದನ್ನು ಕಲ್ಪಿಸಿಕೊಡುವಂತ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಹೇಳಿದರು.
ತಾಲ್ಲೂಕಿನ ಐನಾಪುರ ಪಟ್ಟಣದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಂಗಳವಾರ ಜರುಗಿದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಸ್ವ–ಉದ್ಯೋಗ ಕ್ಕೆ ಪೂರಕವಾಗಿ ಹಲವಾರು ಅವಕಾಶಗಳು ಇದೆ. ಅದನ್ನು ಮಹಿಳೆಯರು ಉಪಯೋಗಿಸಿಕೊಳ್ಳುವ ಸಾವಲಂಬಿ ಬದುಕಿಗೆ ಮುನ್ನುಡಿ ಇಡಬೇಕು. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವ–ಉದ್ಯೋಗಕ್ಕೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಅರುಣ ಗಾಣಿಗೇರ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಉತ್ತಮ ಸೇವಾ ಕಾರ್ಯ ಮಾಡುತ್ತಿದೆ ಎಂದರು. ಉಪನ್ಯಾಸಕಿ ಪ್ರಿಯವಂದಾ ಹುಲಗಬಾಳಿ, ಆಧುನಿಕ ಜಗತ್ತಿನಲ್ಲಿ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಸ್ತೂರಿ ಮಡಿವಾಳ, ಸದಸ್ಯ ಅರುಣ ಗಾಣಿಗೇರ, ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ, ಸುಧಾ ನಾಯಿಕ, ಸುಭಾಷ ಲೋಂಡೆ, ಯೋಜನಾಧಿಕಾರಿ ಸಂಜೀವ ಮರಾಠಿ, ಅರವಿಂದ ಕಾರ್ಚಿ, ಸವಿತಾ ದೇಸಾಯಿ, ಶಿವು ಶಿಪ್ಪರಮಟ್ಟಿ ಸೇರಿದಂತೆ ನೂರಾರು ಮಹಿಳೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.