ಕಾಗವಾಡ (ಬೆಳಗಾವಿ ಜಿಲ್ಲೆ): ಇಲ್ಲಿಗೆ ಸಮೀಪದ ಮೀರಜ್ ಪಟ್ಟಣದಲ್ಲಿ ₹1 ಕೋಟಿ ಬೆಲೆಬಾಳುವ ಖೋಟಾ ನೋಟುಗಳನ್ನು ಮಹಾರಾಷ್ಟ್ರ ಪೊಲೀಸರು ಈಚೆಗೆ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಪತ್ತೆಯಾದ ಐದು ದಿನಗಳ ನಂತರ ಮಧ್ಯಮಗಳ ಮುಂದೆ ಪ್ರದರ್ಶಿಸಿದ್ದಾರೆ.
ಕಾಗವಾಡದಿಂದ 15 ಕಿ.ಮೀ ದೂರದ ಮಹಾರಾಷ್ಟ್ರ ಸರಹದ್ದಿನಲ್ಲಿ ₹500ರ ಮುಖಬೆಲೆಯ ನಕಲಿ ನೋಟುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ದಾಳಿ ನಡೆಸಿದ ಮೀರಜ್ ಪೊಲೀಸರು, ಐವರು ಆರೋಪಿಗಳನ್ನೂ ಬಂಧಿಸಿದ್ದಾರೆ. ನಕಲಿ ನೋಟು ತಯಾರಿಕೆಗೆ ಬಳಸುತ್ತಿದ್ದ ಯಂತ್ರೋಪಕರಣ, ಬಣ್ಣದ ಸಾಮಗ್ರಿಗಳನ್ನೂ ವಶಕ್ಕೆ ಪಡೆದರು. ಇದರಲ್ಲಿ ಒಬ್ಬ ಆರೋಪಿ ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿ ಕೂಡ ಆಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.