ADVERTISEMENT

ಕಕಮರಿ: ಬಿತ್ತನೆಬೀಜ ವಿತರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 17:22 IST
Last Updated 1 ಜೂನ್ 2020, 17:22 IST
ಕಕಮರಿ ಗ್ರಾಮದ ಅಮ್ಮಾಜೇಶ್ವರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಸೋಮವಾರ ಕೃಷಿ ಅಧಿಕಾರಿ ಯಂಕಪ್ಪ ಅಸ್ಕಿ ಚಾಲನೆ ನೀಡಿದರು
ಕಕಮರಿ ಗ್ರಾಮದ ಅಮ್ಮಾಜೇಶ್ವರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಸೋಮವಾರ ಕೃಷಿ ಅಧಿಕಾರಿ ಯಂಕಪ್ಪ ಅಸ್ಕಿ ಚಾಲನೆ ನೀಡಿದರು   

ಕಕಮರಿ: ‘ರೈತರಿಗೆ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಬಿತ್ತನೆಬೀಜಗಳನ್ನು ವಿತರಿಸುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕೃಷಿ ಅಧಿಕಾರಿ ಯಂಕಪ್ಪ ಅಸ್ಕಿ ಹೇಳಿದರು.

ಗ್ರಾಮದ ಅಮ್ಮಾಜೇಶ್ವರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸೋಮವಾರ ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ಭಾಗದಲ್ಲಿ ಹೆಚ್ಚಾಗಿ ತೊಗರಿ ಹಾಗೂ ಉದ್ದು ಬೆಳೆಯುತ್ತಾರೆ. ಹೀಗಾಗಿ, ಅಗತ್ಯ ಪ್ರಮಾಣದಲ್ಲಿ ಆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ರೈತರಿಗೆ ಸಕಾಲದಲ್ಲಿ ದೊರೆಯಲು ಕ್ರಮ ವಹಿಸಲಾಗಿದೆ. ಕೃಷಿಕರು ಆತಂಕ ಪಡುವ ಅಗತ್ಯವಿಲ್ಲ. ಗುಣಮಟ್ಟದ ಬೀಜ ವಿತರಿಸಲಾಗುತ್ತಿದೆ’ ಎಂದರು.

ADVERTISEMENT

ಮುಖಂಡ ಮುತ್ತಣ್ಣ ಸಿಂದೂರ, ‘ಗ್ರಾಮದ ಸಹಕಾರಿ ಸಂಘವನ್ನು ಬೀಜ ವಿತರಣೆ ಕೇಂದ್ರ ಮಾಡಿರುವುದರಿಂದ ಕಕಮರಿ, ಕೊಟ್ಟಲಗಿ, ರಾಮತೀರ್ಥ ಗ್ರಾಮಗಳ ರೈತರಿಗೆ ಅನುಕೂಲವಾಗಿದೆ’ ಎಂದು ತಿಳಿಸಿದರು.

ಸಹಾಯಕ ಕೃಷಿ ಅಧಿಕಾರಿ ಎಸ್.ಎಂ. ಕಾಮಗೊಂಡ, ಅಮ್ಮಾಜೇಶ್ವರಿ ಪಿಕೆಪಿಎಸ್ ಆಡಳಿತ ಮಂಡಳಿ ಸದಸ್ಯರಾದ ಕಲ್ಲಪ್ಪ, ರಾಜೇಂದ್ರ ವಾಲಿ, ಶ್ರೀಶೈಲ ಜನಗೌಡ, ಕಲ್ಲಪ್ಪ ಅಡಹಳ್ಳಿ, ಸಿಇಒ ಎಂ.ಎಸ್. ಜನಗೌಡ, ಸುರೇಶ ದಾಶ್ಯಾಳ, ಮೇಲಪ್ಪ ಜನಗೌಡ, ಶಿವಾನಂದ ಬಸರಗಿ, ಸಂತೋಷ ಕಾಂಬಳೆ, ದರೆಪ್ಪ ಮಲಾಬದಿ, ಮಹಾಂತೇಶ ಹೊನವಾಡ, ಅಪ್ಪಾಸಾಬ ಸಿಂದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.