ADVERTISEMENT

ಮಹಾಪುರುಷರ ಸ್ಮರಣೆ ಮಾಡಿ: ಅಭಿನವ ಶಿವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:42 IST
Last Updated 4 ಫೆಬ್ರುವರಿ 2026, 7:42 IST
ಬೆಟಗೇರಿಯಲ್ಲಿ ಭಾನುವಾರ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವೇಳೆ ಗಣ್ಯರು, ಶ್ರೀಗಳನ್ನು ಸತ್ಕರಿಸಲಾಯಿತು
ಬೆಟಗೇರಿಯಲ್ಲಿ ಭಾನುವಾರ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವೇಳೆ ಗಣ್ಯರು, ಶ್ರೀಗಳನ್ನು ಸತ್ಕರಿಸಲಾಯಿತು   

ಬೆಟಗೇರಿ: ‘ದೇಶಕ್ಕಾಗಿ ಬದುಕನ್ನೇ ತ್ಯಾಗಮಾಡಿದ ಮಹಾನ್‌ ಪುರುಷರನ್ನು ಪ್ರತಿಯೊಬ್ಬರೂ ಸ್ಮರಣೆ ಮಾಡಬೇಕು. ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬದುಕಿನ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’  ಎಂದು ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.

ಗೋಕಾಕ ತಾಲ್ಲೂಕಿನ ಬೆಟಗೇರಿ ಗ್ರಾಮದ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಹಯೋಗದಲ್ಲಿ ಭಾನುವಾರ ನಡೆದ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ಚನ ನೀಡಿದರು.

ಕಡಕೋಳದ ಅಭಿನವ ಸಿದ್ದರಾಯಜ್ಜ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಸವಂತ ಕೋಣಿ, ಲಕ್ಷ್ಮಣ ಚಂದರಗಿ, ಹನುಮಂತ ವಡೇರ, ಲಕ್ಕಪ್ಪ ಚಂದರಗಿ, ಮಾರುತಿ ಚಂದರಗಿ, ಅಶೋಕ ಕೋಣಿ, ಸದಾಶಿವ ಕುರಿ, ಲಕ್ಷ್ಮಣ ಸೋಮಗೌಡ್ರ, ಸುಭಾಷ ಕರೆನ್ನವರ, ಸತ್ತೆಪ್ಪ ಹೊರಟ್ಟಿ, ಮಾಯಪ್ಪ ಬಾಣಸಿ, ಈರಯ್ಯ ಹಿರೇಮಠ ಹಲವರು ಇದ್ದರು.

ADVERTISEMENT

ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆರತಿ, ಕುಂಭ ಉತ್ಸವದೊಂದಿಗೆ ಮೂರ್ತಿಗಳ ಮೆರವಣಿಗೆ ಜರುಗಿತು. ಯುವಕರು ಕಾಲ್ನಡಿಗೆ ಮೂಲಕ ನಂದಗಡದಿಂದ ವೀರಜ್ಯೋತಿ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.