ADVERTISEMENT

ಬೆಳಗಾವಿ: ಮುರಿದ ಕನ್ನಡ ಬಾವುಟದ ಸ್ತಂಭ; ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 13:08 IST
Last Updated 29 ಡಿಸೆಂಬರ್ 2020, 13:08 IST
ಸಿಸಿಟಿವಿ ದೃಶ್ಯ: ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಮೆ ಬಳಿ ಕನ್ನಡ ಬಾವುಟ ಮುರಿದು ಬೀಳುವುದಕ್ಕೂ ಮುನ್ನ
ಸಿಸಿಟಿವಿ ದೃಶ್ಯ: ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಮೆ ಬಳಿ ಕನ್ನಡ ಬಾವುಟ ಮುರಿದು ಬೀಳುವುದಕ್ಕೂ ಮುನ್ನ   

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಮೆ ಬಳಿ ಕನ್ನಡ ಬಾವುಟ ಹಾರಿಸಲು ಹಾಕಿದ್ದ ದೊಡ್ಡ ಸ್ತಂಭ ಮುರಿಯಲು ಕಬ್ಬಿನ ಲಾರಿ ಕಾರಣ ಎನ್ನುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳಿಂದ ತಿಳಿದುಬಂದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಸ್ಥಳದಲ್ಲಿ ದಿಢೀರನೆ ಚಿಕ್ಕ ಕಂಬ ಹಾಕಿರುವುದಕ್ಕೆ ಕನ್ನಡಪರ ಹೋರಾಟಗಾರರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಈ ಕೃತ್ಯವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಬಾವುಟಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದರು.

ಸ್ಥಳಕ್ಕೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಭೇಟಿ ನೀಡಿ ಪರಿಶೀಲಿಸಿ, ‍‘ಪೊಲೀಸರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದರು.

ADVERTISEMENT

ಬಳಿಕ ಪೊಲೀಸರು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲಿಸಿದ್ದರು. ಕಂಬದ ಬಳಿ ಕಟ್ಟಿದ್ದ ವೈರೊಂದು ಲಾರಿಗೆ ಸಿಲುಕಿದ್ದರಿಂದ ಅದು ಮುರಿದಿರುವುದು ಗೊತ್ತಾಗಿದೆ. ಇದರೊಂದಿಗೆ ಗೊಂದಲ ಬಗೆಹರಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.