ಬೆಳಗಾವಿ: ಇಲ್ಲಿನ ಕಂಪ್ಲೀಟ್ ಕರಾಟೆ ಅಕಾಡೆಮಿ ಕರ್ನಾಟಕ ವತಿಯಿಂದ ಇಲ್ಲಿನ ಕ್ಯಾಂಪ್‌ನಲ್ಲಿ ಕರಾಟೆ ಸ್ಪರ್ಧೆ ನಡೆಯಿತು.
180 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಉದ್ಯಮಿ ಅಜಿತ್ ಶಾನ್‌ಬಾಗ್, ಕರಾಟೆ ಮಾಸ್ಟರ್ ಜಿತೇಂದ್ರ ಕಾರ್ತಿಕ ಹಾಗೂ ಗುರುನಾಥ್ ಭಾಗವಹಿಸಿದ್ದರು. ಬಾಲಕರ ವಿಭಾಗದಲ್ಲಿ ಯಶ್ ಪಾಟೀಲ ಮತ್ತು ಬಾಲಕಿಯರ ವಿಭಾಗದಲ್ಲಿ ವಿಭಾಗದಲ್ಲಿ ಸಂಜನಾ ಬಾಗೇವಾಡಿ ಚಾಂಪಿಯನ್ ಆಫ್ ಚಾಂಪಿಯನ್ ಟ್ರೋಫಿ ಗೆದ್ದರು.
ಅಕ್ಷರ ಪರಮ, ಸಚಿನ ಭರಮಣ್ಣವರ, ರಮೇಶ ಗುಡಿಕಲ್ ತೀರ್ಪುಗಾರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.