ADVERTISEMENT

ಮಾಜಿ ಸೈನಿಕ ಮುರೆಪ್ಪ ಶೇಗುಣಸಿಗೆ ರಾಜ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 12:29 IST
Last Updated 25 ಜುಲೈ 2024, 12:29 IST
ಮುರೆಪ್ಪ ಶೇಗುಣಸಿ
ಮುರೆಪ್ಪ ಶೇಗುಣಸಿ   

ರಾಯಬಾಗ: ತಾಲ್ಲೂಕಿನ ಮುಗಳಖೋಡ ದ ಮಾಜಿ ಸೈನಿಕ ಮುರೆಪ್ಪ ಶೇಗುಣಸಿ ಅವರ ಸಾಮಾಜಿಕ ಸೇವೆಗಳನ್ನು ಪರಿಗಣಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ರಾಜ್ಯ ಪ್ರಶಸ್ತಿಯನ್ನು‌ ಕಾರ್ಗಿಲ್ ವಿಜೋತ್ಸವದ ಸವಿ ನೆನಪಿಗಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಬೆಳಗಾವಿ ಅವರ ಸಂಯುಕ್ತಾಶ್ರಯದಲ್ಲಿ ನಡೆದ 25ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

ಸೇವೆಯಿಂದ ನಿವೃತ್ತಿಯಾದ ನಂತರ ಇವರು ಸಾಮಾಜಿಕ ಕಾರ್ಯಗಳತ್ತ ಆಕರ್ಷಿತರಾಗಿ, ತಮ್ಮ ಸ್ವಂತ ಖರ್ಚಿನಲ್ಲೇ ಇಟ್ನಾಳ - ಮುಗಳಖೋಡ ರಸ್ತೆಗೆ ಜೆಲ್ಲಿ ಹಾಕಿಸಿ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಪಟ್ಟಣದ ವಿವಿಧ ಭಾಗಗಳಲ್ಲಿ, ಬಸ್ ತಂಗುದಾನಗಳಲ್ಲಿ ಇವರು ತಾವೇ ಖುದ್ದಾಗಿ ಸ್ವಚ್ಛತೆ ಮಾಡಿದ್ದಲ್ಲದೇ ಇನ್ನೂ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT