ADVERTISEMENT

ಯಮಕನಮರಡಿ | ಶಿರೂರ ಜಲಾಶಯದಿಂದ 3,500 ಕ್ಯುಸೆಕ್ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 16:10 IST
Last Updated 22 ಜುಲೈ 2024, 16:10 IST
ಹುಕ್ಕೇರಿ ತಾಲ್ಲೂಕಿನ ಶಿರೂರ ಜಲಾಶಯದ ಎರಡು ಕ್ರಸ್ಟ್‌ಗೇಟ್‌ ತೆರೆದು ನೀರು ಬಿಡುಗಡೆ ಮಾಡಲಾಯಿತು
ಹುಕ್ಕೇರಿ ತಾಲ್ಲೂಕಿನ ಶಿರೂರ ಜಲಾಶಯದ ಎರಡು ಕ್ರಸ್ಟ್‌ಗೇಟ್‌ ತೆರೆದು ನೀರು ಬಿಡುಗಡೆ ಮಾಡಲಾಯಿತು   

ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಶಿರೂರ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಭಾನುವಾರ ಎರಡು ಕ್ರಸ್ಟ್‌ಗೇಟ್‌ ತೆರೆದು 3,500 ಕ್ಯುಸೆಕ್ ನೀರು ಬಿಡುಗಡೆಗೊಳಿಸಲಾಯಿತು.

ಇದಕ್ಕೂ ಮುನ್ನ ಪೂಜೆ ಸಲ್ಲಿಸಿದ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಿಕ, ‘ಜಲಾಶಯ ಭರ್ತಿಗೆ ಎರಡು ಅಡಿಯಷ್ಟೇ ಬಾಕಿ ಇದೆ. ಮತ್ತೊಂದೆಡೆ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಬೆಳಗಾವಿ ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯದಿಂದಲೂ 4,500 ಕ್ಯುಸೆಕ್‌ ನೀರು ಬಿಡಲಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಎರಡು ಕ್ರಸ್ಟ್‌ಗೇಟ್‌ ತೆರೆದು ನೀರು ಬಿಟ್ಟಿದ್ದೇವೆ. ಕರಗುಪ್ಪಿ, ಬಗರನಾಳ, ಪಾಶ್ಚಾಪುರ ಗ್ರಾಮಸ್ಥರು ನದಿದಡಕ್ಕೆ ಹೋಗಬಾರದು’ ಎಂದು ಮನವಿ ಮಾಡಿದರು.

‘ಅಗತ್ಯಬಿದ್ದರೆ ನದಿದಡದ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಹುಕ್ಕೇರಿ ತಹಶೀಲ್ದಾರ್‌ ಮಂಜುಳಾ ನಾಯಿಕ, ಹಿಡಕಲ್ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಕೆ.ಎಂಟೆತ್ತೆನವರ, ಶರಣಪ್ಪ ಕಡದಿನ್ನಿ, ಸಂಜಯ ಸಿದ್ದಗೌಡರ, ಭೀಮಶಿ ಕಳ್ಳಿಮನಿ, ಲಗಮಣ್ಣ ಗುರವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.