ADVERTISEMENT

ಬೆಳಗಾವಿ: ರೋಟರಿಯಿಂದ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 13:02 IST
Last Updated 6 ಆಗಸ್ಟ್ 2021, 13:02 IST
ಬೆಳಗಾವಿಯ ವಂಟಮೂರಿಯ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್ ‘ದರ್ಪಣ’ ವತಿಯಿಂದ ಸ್ತನ್ಯಪಾನ ಸಪ್ತಾಹ ಆಚರಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು
ಬೆಳಗಾವಿಯ ವಂಟಮೂರಿಯ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್ ‘ದರ್ಪಣ’ ವತಿಯಿಂದ ಸ್ತನ್ಯಪಾನ ಸಪ್ತಾಹ ಆಚರಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು   

ಬೆಳಗಾವಿ: ಇಲ್ಲಿನ ರೋಟರಿ ಕ್ಲಬ್ ‘ದರ್ಪಣ’ ವತಿಯಿಂದ ವಂಟಮೂರಿಯ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ ಆಚರಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕೋವಿಡ್ ಕುರಿತು ಮಾಹಿತಿಪತ್ರ ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಮಗುವಿಗೆ ಎದೆಹಾಲು ನೀಡುವ ಲಾಭಗಳ ಕುರಿತು ಮತ್ತು ಪೌಷ್ಟಿಕ ಆಹಾರ ಬಗ್ಗೆ ಬಾಣಂತಿಯರಿಗೆ ತಿಳಿಸಲಾಯಿತು. ಹಸುಗೂಸಿಗೆ ಬೇಕಾಗುವ ವಸ್ತುಗಳ ಕಿಟ್‌ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ (ಅಂಟಿನ ಉಂಡೆ) ವಿತರಿಸಲಾಯಿತು.

ಅಧ್ಯಕ್ಷೆ ಪುಷ್ಪಾ ಪರ್ವತರಾವ, ಕಾರ್ಯಕ್ರಮ ವಿಭಾಗದ ಅಧ್ಯಕ್ಷೆ ಮಂಜೂಷಾ ಶಿರಾಲೆ, ಕಾರ್ಯದರ್ಶಿ ಸೌಮ್ಯಾ ಪಾಟೀಲ, ಸಮುದಾಯ ಸೇವೆ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಮನ್ನಿಕೇರಿ ಇದ್ದರು. ನಿಕಟಪೂರ್ವ ಅಧ್ಯಕ್ಷೆ ಶೀತಲ ಚಿಲಮಿ ಅವರು ಡಾ.ಸಂಜಯ ದೊಡ್ಡಮನಿ ಅವರನ್ನು ಸನ್ಮಾನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.