
ಬೆಳಗಾವಿ: ತಾಲ್ಲೂಕಿನ ‘ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯ’ಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೋಮವಾರ ಭೇಟಿ ನೀಡಿ, ಕೃಷ್ಣಮೃಗ ವಿಭಾಗ ಪರಿಶೀಲಿಸಿದರು.
31 ಕೃಷ್ಣಮೃಗ ಸತ್ತಿರುವ ಪ್ರಕರಣದ ಮಾಹಿತಿ ಪಡೆದರು. ಜತೆಗೆ, ಉಳಿದಿರುವ ಏಳು ಪ್ರಾಣಿಗಳ ಆರೈಕೆ, ಅವುಗಳ ಆರೋಗ್ಯ ಸ್ಥಿತಿ, ಆಹಾರ ವ್ಯವಸ್ಥೆ, ಸಂರಕ್ಷಣೆ ಕುರಿತು ವಿವರ ಸಂಗ್ರಹಿಸಿದರು.
‘ಮುಂದೆ ಇಂಥ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಬೇರೆ ಪ್ರಾಣಿಗಳ ಆರೋಗ್ಯದ ಮೇಲೂ ನಿಗಾ ಇರಿಸಬೇಕು’ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಸಿ. ರೇ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್ ಇತರ ಅಧಿಕಾರಿಗಳಿದ್ದರು.
ನವೆಂಬರ್‌ನಲ್ಲಿ ಈ ಕಿರು ಮೃಗಾಲಯದಲ್ಲಿ ಗಳಲೆ ರೋಗದಿಂದ (ಇಂಡೀಡ್ ಹೆಮರೈಜಿಕ್ ಸೆಪ್ಟೀಸಿಮಿಯಾ) 31 ಕೃಷ್ಣಮೃಗಗಳು ಮೃತಪಟ್ಟಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.