ADVERTISEMENT

ಕೆಎಲ್‌ಇ ಸಿಮ್ಯುಲೇಷನ್ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 15:42 IST
Last Updated 17 ಜನವರಿ 2021, 15:42 IST
ಬೆಳಗಾವಿಯ ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯು ಜೆಎನ್‌ಎಂಸಿಯಲ್ಲಿ ಸ್ಥಾಪಿಸಿರುವ ‘ಸುಧಾರಿತ ಸಿಮ್ಯುಲೇಷನ್ ಕೇಂದ್ರ ಮತ್ತು ಕ್ಲಿನಿಕಲ್ ಕೌಶಲ ಪ್ರಯೋಗಾಲಯ’ವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಉದ್ಘಾಟಿಸಿದರು
ಬೆಳಗಾವಿಯ ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯು ಜೆಎನ್‌ಎಂಸಿಯಲ್ಲಿ ಸ್ಥಾಪಿಸಿರುವ ‘ಸುಧಾರಿತ ಸಿಮ್ಯುಲೇಷನ್ ಕೇಂದ್ರ ಮತ್ತು ಕ್ಲಿನಿಕಲ್ ಕೌಶಲ ಪ್ರಯೋಗಾಲಯ’ವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಉದ್ಘಾಟಿಸಿದರು   

ಬೆಳಗಾವಿ: ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯಿಂದ ನಗರದ ಜೆಎನ್‌ಎಂಸಿಯಲ್ಲಿ ಸ್ಥಾಪಿಸಿರುವ ‘ಸುಧಾರಿತ ಸಿಮ್ಯುಲೇಷನ್ ಕೇಂದ್ರ ಮತ್ತು ಕ್ಲಿನಿಕಲ್ ಕೌಶಲ ಪ್ರಯೋಗಾಲಯ’ವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಉದ್ಘಾಟಿಸಿದರು.

ವಿವಿಧ ಸಿಮ್ಯುಲೇಷನ್ ಮಾಡ್ಯೂಲ್‌ಗಳು ಮತ್ತು ಕೇಂದ್ರದ ಸೌಲಭ್ಯಗಳನ್ನು ವೀಕ್ಷಿಸಿದರು, ವೈದ್ಯಕೀಯ ಶಿಕ್ಷಣ ಮತ್ತು ತರಬೇತಿಯಲ್ಲಿ ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನಗಳ ಸಂಯೋಜನೆಯನ್ನು ಅವರು ಶ್ಲಾಘಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಅಕಾಡೆಮಿಯ ಕುಲಪತಿ ಡಾ.ವಿವೇಕ ಎ. ಸಾವಜಿ, ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಜೆಎನ್‌ಎಂಸಿ ಪ್ರಾಂಶುಪಾಲೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ, ಸಿಮ್ಯುಲೇಷನ್ ಕೇಂದ್ರದ ಸಂಯೋಜಕರಾದ ಡಾ.ಅಭಿಜಿತ್ ಗೋಗಟೆ ಮತ್ತು ಡಾ.ರಾಜೇಶ್ ಮಾನೆ, ಕಾರ್ಯದರ್ಶಿ ಡಾ.ಚೈತನ್ಯ ಕಾಮತ್, ಡಾ.ಶ್ರೀದೇವಿ ಯೆಣ್ಣಿ, ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ADVERTISEMENT

ಕಾಲೇಜಿನ ಪೆಥಾಲಜಿ ಮ್ಯೂಸಿಯಂಗೆ ಭೇಟಿ ನೀಡಿದ ಗಣ್ಯರು ಹಲವು ಅಪರೂಪದ ರೋಗವಿಜ್ಞಾನದ ಮಾದರಿಯನ್ನು ಆಸಕ್ತಿಯಿಂದ ವೀಕ್ಷಿಸಿದದರು. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕೆಎಲ್ಇ ಸಂಸ್ಥೆಯ ಕೊಡುಗೆಯನ್ನು ಅಮಿತ್ ಶಾ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.