ADVERTISEMENT

ಜಾತಿ ಗಣತಿ ವರದಿಯ ದತ್ತಾಂಶ ಅವೈಜ್ಞಾನಿಕ: ಕೋರೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 16:18 IST
Last Updated 2 ಮಾರ್ಚ್ 2024, 16:18 IST
ಪ್ರಭಾಕರ ಕೋರೆ
ಪ್ರಭಾಕರ ಕೋರೆ   

ಬೆಳಗಾವಿ: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರ ಪಡೆದಿರುವ ಜಾತಿಗಣತಿ ವರದಿಯಲ್ಲಿನ ದತ್ತಾಂಶ ಅವೈಜ್ಞಾನಿಕವಾಗಿದೆ. ವೀರಶೈವ ಲಿಂಗಾಯತ ಸಮುದಾಯ ಇದನ್ನು ತೀವ್ರವಾಗಿ ಖಂಡಿಸುತ್ತದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದ್ದಾರೆ.

‘ಜಾತಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ನೈಜ ವರದಿಯಾಗಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ, ಈ ವರದಿ ಪಾರದರ್ಶಕ ಅನ್ನಿಸುವುದಿಲ್ಲ. ಇದರ ಬಗ್ಗೆ ಸಾರ್ವಜನಿಕ ಚರ್ಚೆಯಾಗಬೇಕು. ಸರಿಯಾದ ಅಂಕಿ– ಅಂಶ ಸಂಗ್ರಹಿಸಿ, ಇಂಥ ವರದಿ ರೂಪಿಸಬೇಕು’ ಎಂದು ಅವರು ತಿಳಿಸಿದ್ದಾರೆ.

‘ಯಾರಿಗೂ ಭೇಟಿಯಾಗದೆ ತರಾತುರಿಯಲ್ಲಿ ರೂಪಿಸಿದ ವರದಿಯನ್ನು ನಮ್ಮ ಸಮಾಜ ಒಪ್ಪಲ್ಲ. ಸರ್ಕಾರವು ಬದ್ಧತೆ, ಪ್ರಾಮಾಣಿಕತೆಯಿಂದ ಇದನ್ನು ರೂಪಿಸಿ, ಮತ್ತೊಮ್ಮೆ ಪರಾಮರ್ಶಿಸಲಿ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.