ADVERTISEMENT

ಬೆಳಗಾವಿ: ಮಲಪ್ರಭಾ, ಘಟಪ್ರಭಾ ಅಬ್ಬರ ಇಳಿಮುಖ

ಕೃಷ್ಣಾ ಒಳಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 6:21 IST
Last Updated 20 ಆಗಸ್ಟ್ 2020, 6:21 IST
ಕೃಷ್ಣ ನದಿಯ ಹರಿವು–ಸಾಂದರ್ಭಿಕ ಚಿತ್ರ
ಕೃಷ್ಣ ನದಿಯ ಹರಿವು–ಸಾಂದರ್ಭಿಕ ಚಿತ್ರ   

ಬೆಳಗಾವಿ: ಕೃಷ್ಣಾ ಹೊರತುಪಡಿಸಿದರೆ ಜಿಲ್ಲೆಯ ಇನ್ನುಳಿದ ಎಲ್ಲ ನದಿಗಳ ಅಬ್ಬರ ಇಳಿಮುಖವಾಗಿದೆ. ನೆರೆಯ ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಕೃಷ್ಣಾ ನದಿಯ ಒಳಹರಿವು ಹೆಚ್ಚಳವಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.95 ಲಕ್ಷ ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 33 ಸಾವಿರ ಕ್ಯುಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾಗೆ ಸೇರಿಕೊಳ್ಳುತ್ತಿದೆ. 2.29 ಲಕ್ಷ ಕ್ಯುಸೆಕ್‌ ಒಳಹರಿವು ಇದೆ. ಹಿಂದಿನ ದಿನ 2.21 ಲಕ್ಷ ಕ್ಯುಸೆಕ್‌ ಇತ್ತು.

ಮಲಪ್ರಭಾ ನದಿಯ ಒಳಹರಿವು 5,644 ಕ್ಯುಸೆಕ್‌ಗೆ ಇಳಿದಿದೆ. ಸವದತ್ತಿ ಬಳಿಯ ನವಿಲುತೀರ್ಥ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣವೂ ಇಳಿಕೆಯಾಗಿದ್ದು, 3,964 ಕ್ಯುಸೆಕ್‌ಗೆ ತಲುಪಿದೆ. ನದಿಪಾತ್ರ ಮೀರಿ ಹರಿಯುತ್ತಿದ್ದ ನೀರು, ತನ್ನ ಸ್ವಸ್ಥಾನಕ್ಕೆ ಮರಳುತ್ತಿದೆ. ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕಿನ ಹಳ್ಳಿಗಳಿಗೆ ನುಗ್ಗಿದ್ದ ನೀರು ನಿಧನವಾಗಿ ಹಿಂದಕ್ಕೆ ಸರಿಯುತ್ತಿದೆ.

ADVERTISEMENT

ಘಟಪ್ರಭಾ ನದಿಯ ಒಳಹರಿವು 31,627 ಕ್ಯುಸೆಕ್‌ಗೆ ಇಳಿದಿದೆ. ಇದರಂತೆ ಹಿಡಕಲ್‌ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣವೂ 35,888 ಕ್ಯುಸೆಕ್‌ಗೆ ಇಳಿದಿದೆ. ಗೋಕಾಕ ನಗರದೊಳಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟು ಮಾಡಿರುವ ಘಟಪ್ರಭಾ ಇಳಿಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.