ADVERTISEMENT

ಅಗ್ನಿ ದುರಂತ: ಕಾರ್ಮಿಕನ ಕುಟುಂಬಕ್ಕೆ ಹೆಬ್ಬಾಳಕರ ಸಾಂತ್ವನ

ಹೆತ್ತವರಿಗೆ ಧೈರ್ಯ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 16:11 IST
Last Updated 12 ಆಗಸ್ಟ್ 2024, 16:11 IST
ಬೆಳಗಾವಿ ತಾಲ್ಲೂಕಿನ ಮಾರ್ಕಂಡೇಯ ನಗರದಲ್ಲಿರುವ ಮೃತ ಕಾರ್ಮಿಕ ಯಲಗೊಂಡ ಅವರ ಮನೆಗೆ ಸೋಮವಾರ ಭೇಟಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಮೃತರ ತಂದೆ ಹಾಗೂ ಸಹೋದರಿಯರಿಗೆ ಸಾಂತ್ವನ ಹೇಳಿದರು
ಬೆಳಗಾವಿ ತಾಲ್ಲೂಕಿನ ಮಾರ್ಕಂಡೇಯ ನಗರದಲ್ಲಿರುವ ಮೃತ ಕಾರ್ಮಿಕ ಯಲಗೊಂಡ ಅವರ ಮನೆಗೆ ಸೋಮವಾರ ಭೇಟಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಮೃತರ ತಂದೆ ಹಾಗೂ ಸಹೋದರಿಯರಿಗೆ ಸಾಂತ್ವನ ಹೇಳಿದರು   

ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದ ಬಳಿ ಈಚೆಗೆ ಕಾರ್ಖಾನೆಯ ಬೆಂಕಿ ಅವಘಡದಲ್ಲಿ ಮೃತಪಟ್ಟ ಮಾರ್ಕಂಡೇಯ ನಗರದ ಯುವಕ ಯಲಗೊಂಡ ಸಣ್ಣಯಲ್ಲಪ್ಪ ಗುಂಡ್ಯಾಗೋಳ ಅವರ ಕುಟುಂಬಸ್ಥರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಾಂತ್ವನ ಹೇಳಿದರು.

ಮೃತ ಯುವಕನ ಮನೆಗೆ ಸೋಮವಾರ ಭೇಟಿ ನೀಡಿದ ಸಚಿವೆ, ಅವರ ತಂದೆ, ತಾಯಿ ಹಾಗೂ ಸಹೋದರಿಯರನ್ನು ಸಂತೈಸಿದರು. ಘಟನೆ ನಡೆದಿರುವುದು ದುರದೃಷ್ಟಕರ, ಇದರಿಂದ ನೋವಾಗಿವೆ. ಮೃತ ಯಲಗೊಂಡ (ಯಲ್ಲಪ್ಪ) ಕ್ರಿಯಾಶೀಲ‌ ವ್ಯಕ್ತಿಯಾಗಿದ್ದರು. ಯುವಕನ ಕುಟುಂಬದೊಂದಿಗೆ ನಮ್ಮ ಕುಟುಂಬ ಸದಾ ಜೊತೆಗಿರುತ್ತದೆ ಎಂದು ಹೇಳಿದರು.

‘ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ, ಉತ್ತಮ ಭವಿಷ್ಯ ನೀಡಿ. ಅವರನ್ನು ಚೆನ್ನಾಗಿ ಬೆಳೆಸಿ’ ಎಂದು ಸಚಿವರು ತಂದೆ -ತಾಯಿಯರಲ್ಲಿ ವಿನಂತಿಸಿದರು.

ADVERTISEMENT

ವಾರದಿಂದಲೂ ಉಪವಾಸ ಇದ್ದ ಯಲಗೊಂಡ ಅವರ ತಾಯಿಗೆ ಸಮಾಧಾನ ಹೇಳಿದ ಸಚಿವೆ, ಮನೆಯಲ್ಲೇ ಕೆಲ ಹೊತ್ತು ಕಳೆದು ಅವರಿಗೆ ಊಟ ಮಾಡಿಸಿದರು

ಸಾಂತ್ವನ: ತಾಲ್ಲೂಕಿನ ಕೋನೆವಾಡಿ ಗ್ರಾಮದ ರೈತ ಭರ್ಮಾ ಪಾವಸೆ ಹೊಲದ ಕೆಲಸದ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಮೃತ ರೈತನ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಜೊತೆಗೆ, ಲಕ್ಷ್ಮಿತಾಯಿ ಫೌಂಡೇಷನ್ ವತಿಯಿಂದ ಆರ್ಥಿಕವಾಗಿ ಸಹಾಯ ಮಾಡಿದರು.

ಬೆಳಗಾವಿ ತಾಲ್ಲೂಕಿನ ಕೋನೆವಾಡಿ ಗ್ರಾಮದಲ್ಲಿ ಮೃತ ರೈತ ಭರ್ಮಾ ಪಾವಸೆ ಅವರ ಮನೆಗೆ ಸೋಮವಾರ ಭೇಟಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಾಂತ್ವನ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.