ADVERTISEMENT

ಹತಾಶೆಯಿಂದ ಬಿಜೆಪಿ ಅಪಪ್ರಚಾರ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 16:16 IST
Last Updated 24 ಏಪ್ರಿಲ್ 2024, 16:16 IST
ಗೋಕಾಕ ವಿಧಾನಸಭಾ ಕ್ಷೇತ್ರದ ವಿವಿಧಡೆ ಮೃಣಾಲ್‌ ಹೆಬ್ಬಾಳಕರ ಪ್ರಚಾರ ನಡೆಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಜನರ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು
ಗೋಕಾಕ ವಿಧಾನಸಭಾ ಕ್ಷೇತ್ರದ ವಿವಿಧಡೆ ಮೃಣಾಲ್‌ ಹೆಬ್ಬಾಳಕರ ಪ್ರಚಾರ ನಡೆಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಜನರ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು   

ಗೋಕಾಕ: ‘ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ರಾಜ್ಯ ಬಿಜೆಪಿ ನಾಯಕರು ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಗೋಕಾಕ ವಿಧಾನಸಭಾ ಕ್ಷೇತ್ರದ ಶಿಂದಿಕುರಬೇಟ, ಧೂಪದಾಳ‌ ಹಾಗೂ ಪಾಮಲದಿನ್ನಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪರ ಪ್ರಚಾರ ನಡೆಸಿದ ಸಚಿವೆವರು, ‘ಚುನಾವಣೆ ಬಳಿಕ ನಿಲ್ಲಿಸಲು ಇದು ಮೋದಿ ಗ್ಯಾರಂಟಿ ಅಲ್ಲ. ಸಿದ್ದರಾಮಯ್ಯ ಗ್ಯಾರಂಟಿ ಯಾವತ್ತೂ ಬಂದ್ ಆಗುವುದಿಲ್ಲ’ ಎಂದರು.

‘ಎರಡು ತಿಂಗಳ ಹಿಂದಷ್ಟೇ ಮೋದಿ, ಯಡಿಯೂರಪ್ಪ ಅವರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದ ಜಗದೀಶ ಶೆಟ್ಟರ್, ಇದೀಗ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಮತ್ತೆ ಬಿಜೆಪಿಗೆ ಹೋಗಿದ್ದಾರೆ. ಹೊರಗಿನ ಅಭ್ಯರ್ಥಿಯನ್ನು ತಿರಸ್ಕರಿಸಿ ಮನೆ ಮಗನನ್ನು ಗೆಲ್ಲಿಸಿ’ ಎಂದರು.

ADVERTISEMENT

ಮುಖಂಡರಾದ ಮಹಾಂತೇಶ ಕಡಾಡಿ, ಅಶೋಕ ಪೂಜಾರಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಸಿದ್ದಲಿಂಗ ದಳವಾಯಿ, ಗಂಗಾಧರ ಬಡಕುಂದ್ರಿ, ಚಂದ್ರಶೇಖರ ಕೊಣೂರ, ಪುಟ್ಟು ಖಾನಾಪುರ, ಇಮರಾನ್ ತಪರೇರ್, ಲಕ್ಕಣ್ಣ ಸವಸುದ್ದಿ, ವಿವೇಕ್ ಜಪ್ತಿ, ಮಾರುತಿ ವಿಜಯನಗರ, ಮಲಕಾರಿ ಭಂಗಿ, ಕಲ್ಪನಾ ಜೋಷಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.