ಗೋಕಾಕ (ಬೆಳಗಾವಿ ಜಿಲ್ಲೆ): ಹತ್ತು ವರ್ಷಗಳ ಬಳಿಕ ನಡೆಯುತ್ತಿರುವ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ನಾಡಿನ ಜನತೆಯ ಒಳಿತಿಗಾಗಿ ಇಲ್ಲಿಯ ಸಾಯಿ ಸಮರ್ಥ ಫೌಂಡೇಶನ್ ವತಿಯಿಂದ ಬುಧವಾರ ಹಮ್ಮಿಕೊಂಡ ಕುಂಕುಮಾರ್ಚಣೆ, ಲಲಿತಾ ಸಹಸ್ರನಾಮ, ಜಪಯಜ್ಞ ಹಾಗೂ ಭಜನೆ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು.
ಮಹಾಲಕ್ಷ್ಮಿ ಸಭಾ ಭವನದಲ್ಲಿ ಅಪಾರ ಸಂಖ್ಯೆಯ ಹೆಣ್ಣಮಕ್ಕಳು, ಗೃಹಿಣಿಯರು, ಹಿರಿಯರು ಕೂಡ ಸೇರಿದರು. ಮಾತಾಜಿ ಶಾರದಾಮಯಿ, ಜಯಶ್ರೀ ರಮೇಶ ಜಾರಕಿಹೊಳಿ, ಅನುಪಾ ದಿನೇಶ ಕೌಶಿಕ, ಗೀತಾ ಅರುಣ ಸಾಲಳ್ಳಿ, ಸೌಜನ್ಯ ಸಂಜು ಚಿಪ್ಪಲಕಟ್ಟಿ, ಜ್ಞಾನಾ ಆನಂದ ಪಾಟೀಲ ಮುಂತಾದವರು ನೇತೃತ್ವ ವಹಿಸಿದರು.
ಅಂದವಾಗಿ ಸಿದ್ಧಗೊಳಿಸಿದ್ದ ಮಹಾಲಕ್ಷ್ಮಿ ಮೂರ್ತಿಯನ್ನು ವೇದಿಕೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಗಣ್ಯರು ದೀಪ ಬೆಳಗಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲು ಸಹಸ್ರ ಲಲಿತಾ ನಾಮ ಜಪ ನಡೆಯಿತು. ಬಳಿಕ ಜಪಯಜ್ಞ ನಡೆಯಿತು. ಮಹಿಳೆಯರು ಸಾಮೂಜಿಕ ಭಜನೆಯಲ್ಲಿ ಪಾಲ್ಗೊಂಡು ಭಕ್ತಿ ಗೀತೆಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.