ADVERTISEMENT

ಜಮೀನಿಗೆ ಹಾನಿ: ಎಂಜಿನಿಯರ್‌ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 16:32 IST
Last Updated 8 ಆಗಸ್ಟ್ 2024, 16:32 IST
ಹಿರೇಬಾಗೇವಾಡಿ ಬಳಿಯ ಮಲ್ಲಪ್ಪನ ಗುಡ್ಡದಲ್ಲಿ ಆರ್‌ಸಿಯು ಕಟ್ಟಡಗಳ ನಿರ್ಮಾಣ ಸ್ಥಳಕ್ಕೆ  ಆರೋಗ್ಯ ಮತ್ತು  ಟುಂಬ ಇಲಾಖೆಯ ಸಹಾಯಕ ಎಂಜಿನಿಯರ್‌ ಅರುಣ ಕುಮಾರ ಗುರುವಾರ ಭೇಟಿ ನೀಡಿದರು
ಹಿರೇಬಾಗೇವಾಡಿ ಬಳಿಯ ಮಲ್ಲಪ್ಪನ ಗುಡ್ಡದಲ್ಲಿ ಆರ್‌ಸಿಯು ಕಟ್ಟಡಗಳ ನಿರ್ಮಾಣ ಸ್ಥಳಕ್ಕೆ  ಆರೋಗ್ಯ ಮತ್ತು  ಟುಂಬ ಇಲಾಖೆಯ ಸಹಾಯಕ ಎಂಜಿನಿಯರ್‌ ಅರುಣ ಕುಮಾರ ಗುರುವಾರ ಭೇಟಿ ನೀಡಿದರು   

ಹಿರೇಬಾಗೇವಾಡಿ: ಇಲ್ಲಿನ ಮಲ್ಲಪ್ಪನಗುಡ್ಡದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವ ಸ್ಥಳಕ್ಕೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಹಾಯಕ ಎಂಜಿನಿಯರ್‌ ಅರುಣ ಕುಮಾರ ಅವರು ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.

ಕಟ್ಟಡ ಕಾಮಗಾರಿಯಿಂದ ಜಮೀನುಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿ ರೈತರು ಈಚೆಗೆ ಕುಲಪತಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅರುಣ ಕುಮಾರ ಅವರು, ರಸ್ತೆ ನಿರ್ಮಾಣ, ಅಂತರ್ಜಲ, ಜಮೀನುಗಳಿಗೆ ಉಂಟಾಗುವ ಹಾನಿ ತಡೆ ಕುರಿತು ಚರ್ಚಿಸಿದರು. ತಮ್ಮ ಕಾರ್ಯವ್ಯಾಪ್ತಿಯ ಕೆಲಸಗಳನ್ನು ಮಾಡುವುದಾಗಿ ಮತ್ತು ಹೆಚ್ಚುವರಿ ಕೆಲಸಗಳ ಬಗ್ಗೆ ಕುಲಪತಿ ಜೊತೆಗೆ ಚರ್ಚಿಸುವುದಾಗಿ ರೈತರಿಗೆ ತಿಳಿಸಿದರು.

ರೈತರಾದ ಬಿ.ಎಸ್.ಗಾಣಗಿ, ಉಳವಪ್ಪ ನಂದಿ, ಮಂಜುನಾಥ ವಸ್ತ್ರದ, ಸಂಜಯ ದೇಸಾಯಿ, ಆನಂದ ನಂದಿ, ತಮ್ಮಣ್ಣ ಗಾಣಗಿ, ಬದ್ರುದ್ದೀನ ಬಾಗವಾನ, ಎಂಜಿನಿಯರ್‌ಗಳಾದ ಅರುಣಕುಮಾರ, ಎನ್.ಡಿ. ಗಸ್ತಿ, ದಾಶ್ನಿಕ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.