
ಹುಕ್ಕೇರಿ: ‘ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಲ್ಲಿಸಿದ ಸೇವೆಯ ದಾಖಲೆಯನ್ನು ಸಿಎಂ ಸಿದ್ಧರಾಮಯ್ಯ ಅವರು ಮುರಿದಿದ್ದಾರೆ. ಸಿ.ಎಂ.ಅವರು ಅತ್ಯಂತ ಶ್ರಮಪಟ್ಟು ಈ ಸ್ಥಾನಕ್ಕೆ ತಲುಪಿದ್ದು ಹೆಮ್ಮೆಯ ವಿಷಯ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, 5 ವರ್ಷ ಸಿಎಂ ಅವಧಿಯಲ್ಲಿ ಅವರೆ ಮುಂದುವರಿಯುತ್ತಾರೆಂದು ಸ್ವತಃ ಅವರೇ ಹೇಳಿದ್ದಾರೆ. ಮುಂದಿನ ಬಜೆಟ್ ಕೂಡ ಅವರೇ ಮಂಡಿಸುತ್ತಾರೆ. ಇನ್ನೂ ಎಲ್ಲ ರಾಜಕೀಯ ಪಕ್ಷಗಳಲ್ಲಿ ಗೊಂದಲಗಳು ಇದ್ದೇ ಇರುತ್ತವೆ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಬಂದಿಲ್ಲ ಎಂದರು.
ಎಲ್ಲರೂ ಗೆಲ್ಲೋಕೆ ಬರ್ತಾರೆ: ‘ಮೊದಲ ಮಹಾಯುದ್ಧದಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆ ಗೆದ್ದಿದ್ದು, ಎರಡನೇ ಮಹಾಯುದ್ಧವಾದ ಗ್ರಾಮ ಪಂಚಾಯಿತಿ ಚುನಾವಣೆ. ಇದರಲ್ಲಿ ನಮ್ಮ ಎದುರಾಳಿಯನ್ನು ಸೋಲಿಸುವುದೇ ಗುರಿ’ ಎಂದು ಮಾಜಿ ಸಂಸದ ರಮೇಶ್ ಕತ್ತಿ ಅವರ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿರುಗೇಟು ನೀಡಿ, ಎಲ್ಲರೂ ಗೆಲ್ಲೋಕೆ ಅಂತಾನೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. 2028 ಬಂದಾಗ ನೋಡೋಣ. ನಮ್ಮ ಹೋರಾಟ ಬಹಿರಂಗವಾಗಿ ಹೇಳೋಕಾಗಲ್ಲ ಎಂದರು.
ತನಿಖೆ ನಡೆದಿದೆ: ಜಿಲ್ಲೆಯ ಬಿಡಿಸಿಸಿ ಬ್ಯಾಂಕ್ ಯೂನಿಯಲ್ ಲೀಡರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನಿಸಿದಾಗ, ತನಿಖೆಯ ಬಳಿಕ ಯಾರೂ ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ ಎಂದರು.
ವೀರಣ್ಣ ಬಿಸಿರೊಟ್ಟಿ, ಕಿರಣಸಿಂಗ್ ರಜಪೂತ, ರವೀಂದ್ರ ಜಿಂಡ್ರಾಳಿ, ಶಾನೂಲ್ ತಹಸೀಲ್ದಾರ್, ಮಹಾಂತೇಶ ಮಗದುಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.