ಐಗಳಿ: ‘ತಂದೆ–ತಾಯಿ ಸೇವೆ ಮಾಡಿದರೆ, ಗುರು ಹಾಗೂ ಕಲಿಸಿದ ಶಾಲೆಯ ಋಣದ ಭಾರ ಕಡಿಮೆ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ದೇವರು ಮೆಚ್ಚುತ್ತಾನೆ’ ಎಂದು ವಿಜಯಪುರದ ದ್ರೋಣಾಸ್ ಸೈನಿಕ ತರಬೇತಿ ಅಕಾಡೆಮಿ ಮುಖ್ಯಸ್ಥ ಕಲ್ಮೇಶ ಆಸಂಗಿ ಹೇಳಿದರು.
ಇಲ್ಲಿ ತಾವು ಓದಿದ ಐಗಳಿ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕ, ಬಿಳಿಯ ಬೋರ್ಡ್, ಮಕ್ಕಳಿಗೆ ಆಟಿಕೆ, ಪುಸ್ತಕ, ಬ್ಯಾಂಡ್ ವಿತರಿಸಿ ಅವರು ಮಾತನಾಡಿದರು.
‘ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳಬೇಕು. ಪ್ರೇರಣೆ ಕೊಡಬೇಕು. ಪ್ರತಿ ಕುಟುಂಬದಲ್ಲಿ ಒಬ್ಬರಾದರೂ ಸರ್ಕಾರಿ ನೌಕರರಿಗೆ ಸೇರಬೇಕು. ಆಗ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಎಂ.ಎಸ್. ಹಾಲಳ್ಳಿ, ಹಳೆಯ ವಿದ್ಯಾರ್ಥಿ ಕೇದಾರಿ ಬಿರಾದಾರ, ಆರ್.ಎಂ. ಹಾಲಳ್ಳಿ, ಸಿಆರ್‌ಪಿ ಮಹಾಂತೇಶ ಗುಡದಿನ್ನಿ ಮಾತನಾಡಿದರು.
ಉಪಾಧ್ಯಕ್ಷ ಶಹಜಹಾನ ಮುಜಾವರ, ಪಿಕೆಪಿಎಸ್ ಉಪಾಧ್ಯಕ್ಷ ಅಪ್ಪಾಸಾಬ ಭೀ.ತೆಲಸಂಗ, ಮಹಾದೇವ ಅಥಣಿ, ಕಾಡೇಶ ತೆಲಸಂಗ, ಕಾಮಗೌಡ ಪಾಟೀಲ, ಮಹಾದೇವ ತೆಲಸಂಗ, ಸಿ.ಬಿ. ಬಕಾಲಿ, ಪಿ.ಜೆ. ಶಿಂಧೆ, ಜಿ.ಕೆ. ಭಜಂತ್ರಿ ಇದ್ದರು.
ಮುಖ್ಯ ಶಿಕ್ಷಕ ಎಸ್.ಸಿ. ಹಡಪದ ಸ್ವಾಗತಿಸಿದರು. ವಿ.ಕೆ. ಪವಾರ ನಿರೂಪಿಸಿದರು. ಬಿ.ಕೆ. ಮುಧೋಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.