ADVERTISEMENT

ಎಂಎಲ್‌ಐಆರ್‌ಸಿಗೆ ಲೆಫ್ಟಿನೆಂಟ್ ಜನರಲ್ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 7:19 IST
Last Updated 25 ಜನವರಿ 2022, 7:19 IST
ಬೆಳಗಾವಿಯ ಮರಾಠಾ ಲಘು ಪದಾತಿದಳ ಕೇಂದ್ರಕ್ಕೆ ಜನರಲ್ ಆಫೀಸರ್‌ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ (ಸದರನ್‌ ಕಮಾಂಡಿಂಗ್) ಜೈ ಸಿಂಗ್ ನೈನ್ ಸೋಮವಾರ ಭೇಟಿ ನೀಡಿ ವೀಕ್ಷಿಸಿದರು
ಬೆಳಗಾವಿಯ ಮರಾಠಾ ಲಘು ಪದಾತಿದಳ ಕೇಂದ್ರಕ್ಕೆ ಜನರಲ್ ಆಫೀಸರ್‌ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ (ಸದರನ್‌ ಕಮಾಂಡಿಂಗ್) ಜೈ ಸಿಂಗ್ ನೈನ್ ಸೋಮವಾರ ಭೇಟಿ ನೀಡಿ ವೀಕ್ಷಿಸಿದರು   

ಬೆಳಗಾವಿ: ಇಲ್ಲಿನ ಮರಾಠಾ ಲಘು ಪದಾತಿದಳ ಕೇಂದ್ರ (ಎಂಎಲ್‌ಐಆರ್‌ಸಿ)ಕ್ಕೆ ಜನರಲ್ ಆಫೀಸರ್‌ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ (ಸದರನ್‌ ಕಮಾಂಡಿಂಗ್) ಜೈ ಸಿಂಗ್ ನೈನ್ ಸೋಮವಾರ ಭೇಟಿ ನೀಡಿ, ಅಲ್ಲಿನ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.

ಅವರನ್ನು ಜೂನಿಯರ್ ಲೀಡರ್‌ ವಿಂಗ್‌ನ ಕಮಾಂಡರ್ ಮೇಜರ್‌ ಜನರಲ್ ಪಿ.ಎಸ್. ಬಾಜ್ವಾ ಹಾಗೂ ಎಂಎಲ್‌ಐಆರ್‌ಸಿ ಕಮಾಂಡಂಟ್ ರೋಹಿತ್‌ ಚೌಧರಿ ಬರ ಮಾಡಿಕೊಂಡರು.

ಪದಾತಿ ದಳದ ಕಾರ್ಯವೈಖರಿ ಹಾಗೂ ಕೇಂದ್ರದಲ್ಲಿ ನೀಡುತ್ತಿರುವ ಅತ್ಯಾಧುನಿಕ ತರಬೇತಿ ಮೊದಲಾದ ಬಗ್ಗೆ ಅವರಿಗೆ ತಿಳಿಸಿಕೊಟ್ಟರು. ತರಬೇತಿ ವೇಳೆ ಅಳವಡಿಸಿಕೊಂಡಿರುವ ಆಧುನಿಕ ತಂತ್ರಜ್ಞಾನಗಳು ಮತ್ತು ಆಧುನೀಕರಣ ವ್ಯವಸ್ಥೆಯ ಕ್ರಮಗಳನ್ನು ವೀಕ್ಷಿಸಿದರು.

ADVERTISEMENT

ಇಲ್ಲಿ ಮುಂಬರಲಿರುವ ಭಾರತ ಮತ್ತು ಜಪಾನ್‌ ನಡುವಿನ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್‌–2021’ 3ನೇ ಆವೃತ್ತಿಯ ಕುರಿತು ಕೂಡ ತಿಳಿಸಲಾಯಿತು. ಅದಕ್ಕೆ ನಡೆದಿರುವ ಪೂರ್ವ ತಯಾರಿಯನ್ನೂ ಅವರು ವೀಕ್ಷಿಸಿದರು.

ಸರ್ವ ವಿಧದಲ್ಲೂ ಅತ್ಯಾಧುನಿಕ ತರಬೇತಿ ಕೇಂದ್ರವನ್ನಾಗಿ ರೂಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತಂಡವನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.