
ಹಂದಿಗುಂದ: ರಾಯಬಾಗ ಹಾಗೂ ಕುಡಚಿ ಮತ ಕ್ಷೇತ್ರದ ರೈತರ ಕೃಷಿಭೂಮಿ ಹಾಗೂ ಜನೋಪಯೋಗಿ ಕೆಲಸಕ್ಕಾಗಿ ಕರೆಸಿದ್ಧೇಶ್ವರ ಏತನೀರಾವರಿ ಯೋಜನೆ ಮಂಜೂರು ಮಾಡಿಸಿಕೊಂಡ ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ಜ.19ರಂದು ಬೆಳಿಗ್ಗೆ 10 ಗಂಟೆಗೆ ಹಾರೂಗೇರಿ ಪಟ್ಟಣದಲ್ಲಿ ಅದ್ಧೂರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಅಚಲೇರಿ ಜಿಡಗಾ ಮಠದ ಬಸವರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಕೌಲಗುಡ್ಡದ ಅಮರೇಶ್ವರ ಸ್ವಾಮೀಜಿ, ಕುಂಚನೂರು ಮಾಧುಲಿಂಗ ಮಹಾರಾಜರು ನೇತೃತ್ವ ವಹಿಸಲಿದ್ದಾರೆ. ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ಮತಕ್ಷೇತ್ರದ 10 ಸಾವಿರಕ್ಕೂ ಅಧಿಕ ರೈತರು ಪಾಲ್ಗೊಳ್ಳಲಿದ್ದಾರೆ.
ರೈತರ ಕಾಮಧೇನು: ಹಿಂದೆ ಮಾಜಿ ಸಚಿವ ವಿ.ಎಲ್. ಪಾಟೀಲ ಅವರು ಘಟಪ್ರಭಾ ಎಡದಂಡೆ ಕಾಲುವೆಯ ನೀರಾವರಿ ಯೋಜನೆಯ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿದ್ದರು. ಅವರ ಆದರ್ಶದಂತೆಯೇ ಶಾಸಕ ಮಹೇಂದ್ರ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದಾಳತ್ವದಲ್ಲಿ ಏತ ನೀರಾವರಿ ಮಂಜೂರು ಮಾಡಿಸಿದ್ದಾರೆ.
ಕರೆಸಿದ್ದೇಶ್ವರ ಏತ ನೀರಾವರಿ ಯೋಜನೆಯು ಕುಡಚಿ ಮತಕ್ಷೇತ್ರದ ಖೇಮಲಾಪುರ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ನೀರನ್ನು ಎತ್ತಿ ಚಿಕ್ಕ ಕಾಲುವೆಗೆ ನೀರನ್ನು ಹರಿಸುವ ಯೋಜನೆಯಾಗಿದೆ। ಈ ಏತ ನೀರಾವರಿ ಯೋಜನೆಯು 22,582 ಎಕರೆ (9,139 ಹೆಕ್ಟೇರ್) ಕ್ಷೇತ್ರದ ಜಮೀನುಗಳಿಗೆ ನೀರಾವರಿ ಯೋಜನೆಯನ್ನು ಒದಗಿಸುವ ಉದ್ದೇಶವಾಗಿದೆ. 0.978 ಟಿಎಂಸಿ ಅಡಿ ನೀರಿನ ಪ್ರಮಾಣ ಬೇಕಾಗಿದ್ದು, ಅಂದಾಜು ₹198.90 ಕೋಟಿ ವೆಚ್ಚ ನಿಗದಿ ಮಾಡಲಾಗಿದೆ.
ಯೋಜನೆಗೆ ಒಳಪಡುವ ಗ್ರಾಮಗಳಾದ ಹಾರೂಗೇರಿ, ಬಡಬ್ಯಾಕೂಡ, ಆಲಖನೂರ, ಪರಮಾನಂದವಾಡಿ, ಯಬರಟ್ಟಿ ಖೇಮಲಾಪೂರ, ಕೋಳಿಗುಡ್ಡ, ಸಿದ್ದಾಪುರ, ಯಲ್ಪಾರಟ್ಟಿ ನೀಲಜಿ , ಕುಡಚಿ , ಶಿರಗೂರ, ಅಳಗವಾಡಿ, ಮೊರಬ ಹಾಗೂ ಸುಟ್ಟಟ್ಟಿ, ಸೇರಿದಂತೆ 15 ಹಳ್ಳಿಗಳಿಗೆ ನೀರಾವರಿ ಯೋಜನೆ ರೈತರಿಗೆ ಕಲ್ಪಿಸುವ ಮೂಲಕ ಶಾಸಕ ಮಹೇಂದ್ರ ತಮ್ಮಣ್ಣವರ ರೈತರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಸಿ.ಎಸ್. ಹಿರೇಮಠ
ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಸರ್ಕಾರದ ಮನವಲಿಸಿ ರೈತರಿಗಾಗಿ ₹198.90 ಕೋಟಿಯ ಯೋಜನೆಯನ್ನು ತಂದಿದ್ದು ರೈತರಿಗೆ ಹರ್ಷ ತಂದಿದೆ. ಇದು ಶ್ಲಾಘನೀಯ ಕಾರ್ಯಚೂನಪ್ಪ ಪೂಜಾರಿ ಅಧ್ಯಕ್ಷ ರಾಜ್ಯ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.