ADVERTISEMENT

‌ಬೆಳಗಾವಿ: ₹ 8 ಲಕ್ಷ ಮೌಲ್ಯದ ಮದ್ಯ ಜಪ್ತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 8:54 IST
Last Updated 20 ನವೆಂಬರ್ 2021, 8:54 IST
‌ಬೆಳಗಾವಿಯ ಟಿಳಕವಾಡಿಯ ನೆಹರೂ ರಸ್ತೆಯ ಕಟ್ಟಡವೊಂದರ ಸೆಲ್ಲಾರ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ₹ 8 ಲಕ್ಷ ಮೌಲ್ಯದ 232.500 ಲೀಟರ್‌ ಮದ್ಯವನ್ನು ಅಬಕಾರಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ
‌ಬೆಳಗಾವಿಯ ಟಿಳಕವಾಡಿಯ ನೆಹರೂ ರಸ್ತೆಯ ಕಟ್ಟಡವೊಂದರ ಸೆಲ್ಲಾರ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ₹ 8 ಲಕ್ಷ ಮೌಲ್ಯದ 232.500 ಲೀಟರ್‌ ಮದ್ಯವನ್ನು ಅಬಕಾರಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ   

‌ಬೆಳಗಾವಿ: ನಗರದ ಟಿಳಕವಾಡಿಯಲ್ಲಿರುವ ನೆಹರೂ ರಸ್ತೆಯ ಕಟ್ಟಡವೊಂದರ ಸೆಲ್ಲಾರ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ₹ 8 ಲಕ್ಷ ಮೌಲ್ಯದ 232.500 ಲೀಟರ್‌ ಮದ್ಯವನ್ನು ಅಬಕಾರಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ.

ಟಿಳಕವಾಡಿಯ ದ್ವಾರಕ ನಗರದ ಶಾಮ್‌ ರೆಡ್ಡಿ (52) ಬಂಧಿತ ಆರೋಪಿ. ಅವರನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.

‘ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ರಕ್ಷಣಾ ಇಲಾಖೆಯ ಕ್ಯಾಂಟೀನ್‌ನಿಂದ ಖರೀದಿಸಿದ ಮದ್ಯವನ್ನು ಮಾರಾಟಕ್ಕಾಗಿ ಹೊಂದಿದ್ದರು. ಸಾಗಣೆ ಮಾಡುತ್ತಿದ್ದಾಗ ದ್ವಿಚಕ್ರವಾಹನ ಸಮೇತ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಮತ್ತು ಬೆಳಗಾವಿ ದಕ್ಷಿಣ ಜಿಲ್ಲೆಯ ಆಯುಕ್ತ ಜಯರಾಮೇಗೌಡ ಎಂ.ಡಿ. ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಸೂಪರಿಂಟೆಂಡೆಂಟ್ ಸಿ.ಎಸ್. ಪಾಟೀಲ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಮಂಜುನಾಥ ಮೆಳ್ಳಿಗೇರಿ ಹಾಗೂ ಸಿಬ್ಬಂದಿ ಆರ್.ಎಂ. ನದಾಫ, ಸಂತೋಷ ದೊಡ್ಡಮನಿ, ಆರ್. ತಿಗಡಿ, ಆನಂದ ಪಾಟೀಲ, ವಿನಾಯಕ ಬೋರಣ್‌ನವರ ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.