ಜಗದೀಶ ಯಲ್ಲಪ್ಪ ಕವಳೇಕರ
ರಾಮದುರ್ಗ (ಬೆಳಗಾವಿ ಜಿಲ್ಲೆ): ಪ್ರಿಯತಮೆ ಜೊತೆಗೆ ಮದುವೆಗೆ ಕುಟುಂಬಸ್ಥರು ನಿರಾಕರಿಸಿದ ಪರಿಣಾಮ ವಿವಾಹಿತನೊಬ್ಬ ಪ್ರಿಯತಮೆ ಜೊತೆಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ತಾಲ್ಲೂಕಿನ ಮಲ್ಲಾಪುರ ಗ್ರಾಮದ ವಿವಾಹಿತ ಜಗದೀಶ ಯಲ್ಲಪ್ಪ ಕವಳೇಕರ (27), ಗಂಗಮ್ಮ ಪವಾಡೆಪ್ಪ ತ್ಯಾಪಿ (26) ಎಂದು ಗುರುತಿಸಲಾಗಿದೆ. ಮೃತರು ಆತ್ಮಹತ್ಯೆಗೂ ಮುನ್ನ ಒಬ್ಬರಿಗೊಬ್ಬರು ಸೊಂಟಕ್ಕೆ ದುಪ್ಪಟ್ಟಾವನ್ನು (ವೇಲ್) ಬಿಗಿಯಾಗಿ ಕಟ್ಟಿಕೊಂಡು ನದಿಗೆ ಹಾರಿದ್ದಾರೆ.
ಮೃತನ ಹೆಂಡತಿ ಪ್ರಥಮ ಹೆರಿಗೆಗಾಗಿ ತವರು ಮನೆ ಬೋಚಬಾಳ ಗ್ರಾಮಕ್ಕೆ ತೆರಳಿದ್ದಳು. ಆಕೆ ಬಂದ ನಂತರ ಎರಡನೇ ಮದುವೆಯ ವಿಚಾರವನ್ನು ಇತ್ಯರ್ಥ ಮಾಡೋಣ ಎಂದು ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಸೋಮವಾರವೇ ಮನೆ ತೊರೆದ ಇಬ್ಬರೂ ಬುಧವಾರ ಬೆಳಿಗ್ಗೆ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬುಧವಾರ ಬೆಳಿಗ್ಗೆ ರಾಮದುರ್ಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎರಡೂ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಇಬ್ಬರೂ ಅಪ್ಪಿಕೊಂಡು ನೀರಿಗೆ ಬಿದ್ದಿದ್ದರು. ರಾಮದುರ್ಗ ಠಾಣೆ ಪಿಎಸ್ಐ ಸವಿತಾ ಮುನ್ಯಾಳ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.