ADVERTISEMENT

ಭಾವೈಕ್ಯದ ನಾಡಿನಲ್ಲಿ ಶಾಂತಿ ಇರುವುದು

ಮಹಾಪುರಾಣ ಪ್ರವಚನ: ಮಲ್ಲಿಕಾರ್ಜುನ ಶ್ರೀ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 6:19 IST
Last Updated 7 ಆಗಸ್ಟ್ 2023, 6:19 IST
ಕೌಜಲಗಿ ಸಮೀಪದ ಮಮದಾಪೂರ ಗ್ರಾಮದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅನಂತಪುರದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು
ಕೌಜಲಗಿ ಸಮೀಪದ ಮಮದಾಪೂರ ಗ್ರಾಮದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅನಂತಪುರದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು   

ಕೌಜಲಗಿ: ‘ಪುರಾಣ ಪ್ರವಚನಗಳನ್ನು ಶ್ರೀಗಳಿಂದ ಪ್ರತಿಯೊಬ್ಬರೂ ಶ್ರವಣ ಮಾಡಿ ಭಗವಂತ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು. ಭಾವೈಕ್ಯೆತೆಯಿಂದ ಕೂಡಿದ ನಾಡು ಶಾಂತವಾಗಿರುತ್ತದೆ ಮತ್ತು ಸುಭಿಕ್ಷವಾಗಿರುತ್ತದೆ’ ಎಂದು ಅನಂತಪುರದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಸಮೀಪದ ಮಮದಾಪೂರ ಗ್ರಾಮದ ಮೌನಮಲ್ಲಿಕಾರ್ಜುನ ಮಠದಲ್ಲಿ ಶ್ರಾವಣ ಅಧಿಕಮಾಸದ ಅಂಗವಾಗಿ ಒಂದು ತಿಂಗಳ ವರೆಗೆ ನಡೆದ ನಾಲ್ವವಾಡ ವೀರೇಶ್ವರ ಶರಣರ ಮಹಾಪುರಾಣ ಪ್ರವಚನ ಕಾಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಡೆ ಸಂಸ್ಥಾನಮಠದ ‌ಮಹಾಂತ ಸ್ವಾಮೀಜಿ, ಮಮದಾಪೂರದ ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ಸಮ್ಮುಖ, ಗುತ್ತಲ ಕಲ್ಮಠದ ಪ್ರಭು ಸ್ವಾಮೀಜಿ, ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ, ಶಲವಡಿ ಗುರುಶಾಂತೇಶ್ವರ ಸ್ವಾಮೀಜಿ, ರಾಮದುರ್ಗದ ಗುರುಶಾಂತೇಶ್ವರ ಮಠದ ಶಾಂತವೀರ ಸ್ವಾಮೀಜಿ, ಜಮಖಂಡಿ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಪ್ರವಚನ ನೀಡಿದರು.

ADVERTISEMENT

ಶಲವಡಿಯ ವೀರಯ್ಯಶಾಸ್ತ್ರಿ ಅವರು ನಾಲ್ವವಾಡ ವೀರೇಶ್ವರ ಶರಣರ ಮಹಾಪುರಾಣ ಪ್ರವಚನ ನಡೆಸಿಕೊಟ್ಟರು. ಶಲವಡಿಯ ಮುತ್ತಣ್ಣ ಹೆಬಸೂರು ಸಂಗೀತ, ಅಕ್ಬರ್ಸಾಹೇಬ ನದಾಫ್‌ ತಬಲಾ ಸಾಥ್‌ ನೀಡಿದರು. ಶಿಂದಿಕುರಬೇಟದ ಮಯಬೂಬಸಾಬ ನದಾಫ್‌ ದಾಸೋಹ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.